-ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಕೊರೊನಾಗೆ ತುತ್ತಾಗಬಹುದು
-ಒಂಟಿಯಾಗಿದ್ರೆ ಜಂಟಿಯಾಗಿ
ಆಮ್ಸ್ಟರ್ ಡ್ಯಾಮ್: ನೀವು ಸಿಂಗಲ್ ಆಗಿದ್ದರೆ ಲಾಕ್ಡೌನ್ ವೇಳೆ ಸೆಕ್ಸ್ಗಾಗಿ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳಿ ಎಂದು ಡಚ್ ಸರ್ಕಾರ ತನ್ನ ಜನರಿಗೆ ಸಲಹೆಯನ್ನು ನೀಡಿದ್ದು, ಈ ಕುರಿತು ಮಾರ್ಗಸೂಚಿಯನ್ನ ಪ್ರಕಟಿಸಿದೆ.
Advertisement
ಸಾಂಕ್ರಾಮಿಕ ಕೊರೊನಾ ರೋಗದ ಆತಂಕ ಹೆಚ್ಚಾಗುತ್ತಿದ್ದು, ಜನರು ತಮ್ಮ ಸುರಕ್ಷತೆಯಲ್ಲಿರಬೇಕು. ನೀವು ಯಾರ ಜೊತೆಯೂ ರಿಲೇಶನ್ ಶಿಪ್ನಲ್ಲಿ ಇಲ್ಲವಾದಲ್ಲಿ ಓರ್ವ ಸಂಗಾತಿಯನ್ನು ಆಯ್ಕ ಮಾಡಿಕೊಳ್ಳಿ. ಸುರಕ್ಷಿತ ಲೈಂಗಿಕ ಸಂಪರ್ಕದಿಂದ ಕೊರೊನಾದಿಂದ ದೂರ ಇರಬಹುದು ಎಂದು ಡರ್ಚ್ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮತ್ತು ಪರಿಸರ ಸಂಸ್ಥೆ (ಆರ್ಐವಿಎಂ) ಸಲಹೆ ನೀಡಿದೆ.
Advertisement
Advertisement
ಲೈಂಗಿಕ ಸಂಪರ್ಕದಿಂದ ಕೊರೊನಾ ತಗಲುತ್ತಾ ಎಂಬ ಚರ್ಚೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಡಚ್ ಸರ್ಕಾರ ಈ ಪ್ರಕಟನೆಯನ್ನು ಹೊರಡಿಸಿದೆ. ಇದರ ಜೊತೆಗೆ ನಿಮಗೆ ಸಂಗಾತಿ ಇದ್ರೆ ಲೈಂಗಿಕ ಸಂಪರ್ಕದಿಂದ ದೂರವಿರಲು ಪ್ರಯತ್ನಿಸಿ. ಸೆಕ್ಸ್ ದಿಂದ ದೂರವಿರಲು ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಆರ್ಐವಿಎಂ ಹೇಳಿದೆ.
Advertisement
ನಿಮ್ಮ ಸಂಗಾತಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಐಸೋಲೇಶನ್ ನಿಂದ ಚಿಕಿತ್ಸೆ ಪಡೆದು ಹೊರ ಬಂದಿದ್ರೆ ಅವರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಗುಣುಮುಖವಾದ್ರೂ ಅವರಲ್ಲಿ ಎರಡನೇ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಈ ಮೂಲಕ ಸೋಂಕು ಹರಡಬಹುದು. ಹಾಗಾಗಿ ಏಕಾಂಗಿಯಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಆರ್ಐವಿಎಂ ತಿಳಿಸಿದೆ.
ನೆದರಲ್ಯಾಂಡ್ ಸಹ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡುತ್ತಿದ್ದು, ಸೋಮವಾರ ಗ್ರಂಥಾಲಯ, ಸಲೂನ್, ನೇಲ್ ಬಾರ್ಸ್, ಬ್ಯೂಟಿ ಪಾರ್ಲರ್, ಮಸಾಜ್ ಸಲೂನ್ ತೆರೆಯಲು ಷರತ್ತು ಬದ್ಧ ಅನುಮತಿಯನ್ನು ನೀಡಿದೆ.
ಚೀನಾದ ಜೆಎಎಂಎ ನೆಟ್ವರ್ಕ್ ಓಪನ್ ಅಧ್ಯಯನ ತಂಡದ ಪ್ರಕಾರ, ಗುಣಮುಖರಾದ ಶೇ.16ರಷ್ಟು ಪುರುಷರ ವೀರ್ಯದಲ್ಲಿ ಕೊರೊನಾ ಸೋಂಕು ಇರುತ್ತದೆ. ಅಂದರೆ ಗುಣಮುಖರಾದ 38 ಪುರುಷರಲ್ಲಿ 6 ಜನರಿಗೆ ಈ ಲಕ್ಷಣಗಳು ಕಂಡು ಬರಲಿವೆ ಎಂದು ತಿಳಿಸಿದೆ. ಇನ್ನು ಅಧ್ಯಯನ ತಂಡ 15 ರಿಂದ 59 ವರ್ಷದೊಳಗಿನವರನ್ನು ಗಣನೆಗೆ ತೆಗೆದುಕೊಂಡಿತ್ತು.
ಅಧ್ಯಯನ ತಂಡ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಸೋಂಕು ಹರಡುತ್ತೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ವೀರ್ಯದಲ್ಲಿ ಸೋಂಕಿರುತ್ತೆ ಎಂಬುದನ್ನ ಮಾತ್ರ ಹೇಳಿದೆ ಎಂದು ಕೊರೊನಾ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.