– ಕಮೆಂಟರಿ ವೇಳೆ ಅನುಷ್ಕಾ ಬಗ್ಗೆ ವಿವಾದಾತ್ಮಕ ಹೇಳಿಕೆ
– ಸುನಿಲ್ ಗವಾಸ್ಕರ್ ವಿರುದ್ಧ ಆಕ್ರೋಶ
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಎರಡು ಕ್ಯಾಚ್ ಕೈಚೆಲ್ಲಿದ್ದರು. ಈ ಕುರಿತಂತೆ ವಿಶ್ಲೇಷಣೆ ನೀಡಿದ್ದ ಗವಾಸ್ಕರ್ ಅವರ ಕಾಮೆಂಟ್ಗಳು ಸದ್ಯ ವಿವಾದಕ್ಕೆ ಕಾರಣವಾಗಿದೆ.
Advertisement
ಗವಾಸ್ಕರ್ ಕಾಮೆಂಟ್ ವಿರುದ್ಧ ಸಾಮಾಜಿಕ ಜಾಲತಾಣಲದಲ್ಲಿ ಆಕ್ರೋಶ ಹೊರ ಹಾಕಿರುವ ಕ್ರಿಕೆಟ್ ಅಭಿಮಾನಿಗಳು ಸುನಿಲ್ ಗವಾಸ್ಕರ್ ಅವರ ವಿರುದ್ಧ ಕಿರಿಕಾರಿದ್ದಾರೆ. ಅಲ್ಲದೇ ಕಾಮೆಂಟರಿ ಬಾಕ್ಸ್ ನಿಂದ ಅವರನ್ನು ಮನೆಗೆ ವಾಪಸ್ ಕಳುಹಿಸಲು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚೆನ್ನೈ, ಡೆಲ್ಲಿ ತಂಡಗಳ ಬಲಾಬಲ- ಧೋನಿ ಬ್ಯಾಟಿಂಗ್ ಕ್ರಮಾಂಕ ಬದಲಾಗುತ್ತಾ?
Advertisement
Advertisement
ಸೆ.24 ರಂದು ದುಬೈನಲ್ಲಿ ಪಂಜಾಬ್ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಕೊಹ್ಲಿ ಪ್ರಮುಖ ಕ್ಯಾಚ್ಗಳನ್ನು ಕೈಚೆಲ್ಲಿ ಕಳಪೆ ಫೀಲ್ಡಿಂಗ್ ಮಾಡಿದ್ದರು. ನಾಯಕ ಕೆಎಲ್ ರಾಹುಲ್ 83 ರನ್ ಮತ್ತು 89 ರನ್ ಗಳಿಸಿದ್ದ ವೇಳೆ ಕೊಹ್ಲಿ ಕ್ಯಾಚ್ ಡ್ರಾಪ್ ಮಾಡಿದ್ದರು. ಪರಿಣಾಮ ರಾಹುಲ್ 69 ಎಸೆತಗಳಲ್ಲಿ, 14 ಬೌಂಡರಿ, 7 ಸಿಕ್ಸರ್ ಗಳ ನೆರವಿನೊಂದಿಗೆ 132 ರನ್ ಸಿಡಿಸಿದ್ದರು. ಕೊಹ್ಲಿ ಕ್ಯಾಚ್ ಬಿಟ್ಟ ಬಳಿಕ ಕೇವಲ 9 ಎಸೆತಗಳಲ್ಲಿ ರಾಹುಲ್ 42 ರನ್ ಗಳಿಸಿದ್ದರು. ಪರಿಣಾಮ ಪಂದ್ಯದಲ್ಲಿ 207 ರನ್ ಬೃಹತ್ ಮೊತ್ತ ಗಳಿಸಿದ್ದ ಪಂಜಾಬ್ 97 ರನ್ ಗಳ ಭಾರೀ ಅಂತರದಲ್ಲಿ ಗೆಲುವು ಪಡೆದಿತ್ತು. ಇದನ್ನೂ ಓದಿ: ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ
Advertisement
ಇತ್ತ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಕೊಹ್ಲಿ ಬಹುಬೇಗ ಪೆವಿಲಿಯನ್ ಸೇರಿದ್ದರು. ಕೊಹ್ಲಿ ಔಟಾಗುತ್ತಿದಂತೆ ಕ್ರಿಕೆಟ್ ವಿಶ್ಲೇಷಣೆ ನೀಡುತ್ತಿದ್ದ ಸುನಿಲ್ ಗವಸ್ಕಾರ್ ಹಾಟ್ ಕಾಮೆಂಟ್ ಮಾಡಿದ್ದರು. ಕೊಹ್ಲಿ ಕಳಪೆ ಪ್ರದರ್ಶನವನ್ನು ಟೀಕಿಸುವ ವೇಳೆ ಅನುಷ್ಕಾ ಶರ್ಮಾರನ್ನು ಎಳೆದು ತಂದ ಗವಾಸ್ಕರ್, ‘Inhone lockdown me to bas Anushka ki gendon ki practice ki hai’ (ಲಾಕ್ ಟೈಮ್ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳೊಂದಿಗೆ ಅಭ್ಯಾಸ ಮಾಡಿದ್ದಾರೆ) ಎಂದು ಡಬಲ್ ಮಿನಿಂಗ್ ಬರುವಂತೆ ಕಾಮೆಂಟ್ ಮಾಡಿದ್ದರು. ಸದ್ಯ ಈ ಕಾಮೆಂಟ್ಗಳ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಎಡವಿದ್ದೆಲ್ಲಿ?- ಕೊಹ್ಲಿ ಪಡೆಯ ಬಿಗ್ 3 ಮಿಸ್ಟೇಕ್ಸ್
This is so disgusting. The way they don’t forget to bring Anushka whenever he doesn’t perform is so filthy. In whatever context he said, this statement cannot be justified. It isn’t funny at all. https://t.co/0uJXjaSijl
— Anisha (@anishaj16) September 24, 2020
ಉತ್ತಮ ಗೌರವವನ್ನು ಹೊಂದಿರುವ ಗವಾಸ್ಕರ್ ರಂತಹ ವ್ಯಕ್ತಿ ಇಂತಹ ಕೆಳಮಟ್ಟದ ಕಾಮೆಂಟ್ ಮಾಡುವುದು ಸರಿಯಲ್ಲ. ಅದು ಇಂತಹ ದೊಡ್ಡ ವೇದಿಕೆಯಲ್ಲಿ ಅಂತ ಕಾಮೆಂಟ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಅವರನ್ನು ವಾಪಸ್ ಮನೆಗೆ ಕಳುಹಿಸಿದ ಎಂದು ಆಗ್ರಹಿಸಿದ್ದಾರೆ.
ಟೀಂ ಇಂಡಿಯಾ ನಾಯಕರಾಗಿರುವ ಕೊಹ್ಲಿ ಮದುವೆ ಬಳಿಕ ಕೆಲ ಸಮಯ ಫಾರ್ಮ್ ಸಮಸ್ಯೆ ಎದುರಿಸಿದ್ದರು. ಈ ವೇಳೆಯೂ ಕೂಡ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಹೆಸರನ್ನು ಎಳೆದುತಂದು ಕೆಲವರು ಟೀಕೆ ಮಾಡಿ ಪೋಸ್ಟ್ ಮಾಡಿದ್ದರು. ಈ ಟೀಕೆಗಳಿಗೆ ತಿರುಗೇಟು ನೀಡಿದ್ದ ಕೊಹ್ಲಿ, ಪ್ರತಿ ನಕಾರಾತ್ಮಕ ಅಂಶವನ್ನು ಅನುಷ್ಕಾಗೆ ಸಂಬಂಧ ಕಲ್ಪಿಸುವವರಿಗೆ ನಾಚಿಕೆ ಆಗಬೇಕು. ವಿದ್ಯಾವಂತರು ಎಂದು ಹೇಳಿಕೊಳ್ಳುವ ಅಂತಹ ಜನರ ಬಗ್ಗೆ ನಾಚಿಕೆ ಇಲ್ಲ. ನನ್ನ ಆಟದಲ್ಲಿ ನಾನು ಏನು ಮಾಡುತ್ತೇನೆ ಎಂಬುವುದು ಅನುಷ್ಕಾಗೆ ಸಂಬಂಧಿಸಿಲ್ಲ. ಈ ವಿಚಾರದಲ್ಲಿ ಗೇಲಿ ಮಾಡುವವರಿಗೆ ನಾಚಿಕೆ ಇಲ್ಲ. ಏನೇ ಆದರೂ ಅನುಷ್ಕಾ ನನಗೆ ಪ್ರೇರಣೆ, ಸಕಾರಾತ್ಮಕ ಭಾವನೆಯನ್ನು ನೀಡುತ್ತಾರೆ ಎಂದು ತಿರುಗೇಟು ನೀಡಿದ್ದರು.
Remove him from commentary @BCCI https://t.co/EnWEDSgxbf
— . (@imvk__) September 24, 2020