ಮುಂಬೈ: ಲಾಕ್ಡೌನ್ ವೇಳೆ ಪಾರ್ಲೆ ಜಿ ಬಿಸ್ಕಟ್ ತನ್ನ 82 ವರ್ಷಗಳ ದಾಖಲೆಯನ್ನು ಬ್ರೇಕ್ ಮಾಡಿ ಇತಿಹಾಸ ರಚಿಸಿದೆ. ಕೊರೊನಾ ತಡೆಗಾಗಿ ಸರ್ಕಾರ ಎರಡು ತಿಂಗಳು ಸಂಪೂರ್ಣ ಲಾಕ್ಡೌನ್ ವಿಧಿಸಿದ್ದರಿಂದ ಬಹುತೇಕ ಉದ್ಯಮಗಳು ನಷ್ಟ ಅನುಭವಿಸಿವೆ. ಆದ್ರೆ ಪಾರ್ಲೆ ಜಿ ಈ ಸಮಯದಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಂಡಿದೆ.
Advertisement
ಕೇವಲ 5 ರೂ.ಗೆ ದೊರೆಯುವ ಪಾರ್ಲೆ ಜಿ ಬಿಸ್ಕಟ್ ಎಷ್ಟೋ ಪ್ರವಾಸಿ ಕಾರ್ಮಿಕರಿಗೆ ಸಂಜೀವಿನಿ ಆಗಿತ್ತು. ಕಾಲ್ನಡಿಗೆಯಲ್ಲಿ ಗೂಡು ಸೇರಿಕೊಳ್ಳಲು ಹೊರಟ್ಟಿದ್ದ ಕಾರ್ಮಿಕರಿಗೆ ಪಾರ್ಲೆ ಜೀ ಆಸರೆಯಾಗಿತ್ತು. ಹಲವರು ದುಡ್ಡು ನೀಡಿ ಖರೀದಿಸಿದ್ರೆ, ಕಾರ್ಮಿಕರ ಕಷ್ಟಕ್ಕೆ ನೆರವಾಗಲು ಪಾರ್ಲೆ ಜಿ ಖರೀದಿಸಿ ನೀಡುತ್ತಿದ್ದರು. ಇನ್ನು ಲಾಕ್ಡೌನ್ ಆಹಾರ ಕೊರತೆ ಉಂಟಾಗಬಹುದು ಎಂಬ ಭಯದಿಂದ ಪಾರ್ಲೆ ಜಿ ಬಿಸ್ಕಟ್ ಗಳನ್ನು ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದರು.
Advertisement
Advertisement
ದಾಖಲೆ ಬ್ರೇಕ್: ಪಾರ್ಲೆ ಜಿ 1938ರಿಂದಲೂ ಜನರ ಫೇವರೇಟ್ ಬಿಸ್ಕಟ್. ಲಾಕ್ಡಭನ್ ಮಧ್ಯೆ ಪಾರ್ಲೆ ತನ್ನ 82 ವರ್ಷಗಳ ದಾಖಲೆಯನ್ನು ಪುಡಿಗಟ್ಟಿದೆ. ಆದ್ರೆ ಪಾರ್ಲೆ ಕಂಪನಿ ಉತ್ಪನ್ನಗಳ ಮಾರಾಟದ ಅಂಕಿ ಅಂಶಗಳನ್ನು ರಿವೀಲ್ ಮಾಡಿಲ್ಲ. ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ಎಂಟು ದಶಕಗಳಲ್ಲಿಯೇ ಕಂಪನಿಯ ಉತ್ಪನ್ನಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.
Advertisement
ಇನ್ನು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆ ಕಂಪನಿಯ ಶೇರುಗಳ ಬೆಲೆ ಶೇ.5ರಷ್ಟು ಏರಿಕೆ ಕಂಡಿವೆ. ಮಾರಾಟದ ದರ ಸಹ ಶೇ.80 ರಿಂದ 90ಕ್ಕೆ ಏರಿಕೆಯಾಗಿದೆ. ಲಾಕ್ಡೌನ್ ಸಮಯದಲ್ಲಿ ಬ್ರಿಟಾನಿಯಾದ ಗುಡ್ ಡೇ, ಟೈಗರ್, ಮಿಲ್ಕ್ ಬಿಕಿಸ್, ಬಾರ್ಬರ್ನ್ ಮತ್ತು ಮಾರಿ ಬಿಸ್ಕಟ್ ಗಳು ಅಧಿಕ ಮಾರಾಟಗೊಂಡಿವೆ. ಪಾರ್ಲೆಯ ಇನ್ನಿತರ ಉತ್ಪನ್ನಗಳಾದ ಕ್ರ್ಯಾಕ್ಜ್ಯಾಕ್, ಮೊನೆಕಾ, ಹೈಡ್ ಆ್ಯಂಡ್ ಸೀಕ್ ಬಿಸ್ಕಟ್ ಗಳು ಮಾರಾಟ ಆಗಿವೆ.