ಹಾವೇರಿ: ಜೂನ್ 7ರ ನಂತರ ಲಾಕ್ ಡೌನ್ ವಿಸ್ತರಣೆ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಅವರ ಬತ್ತಳಿಕೆಯಲ್ಲಿ ಏನೇನಿದೆಯೋ ನಮಗೇನು ಗೊತ್ತು. ಅವರಿಗೆ ಏನು ಸಲಹೆ ಕೊಟ್ಟಿದ್ದಾರೋ ನಮಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
Advertisement
ಹಾವೇರಿಯಲ್ಲಿ ಫುಡ್ ಕಿಟ್ ವಿತರಣೆ ನಂತರ ಮಾತನಾಡಿದ ಅವರು, ಲಾಕ್ಡೌನ್ ಸಮಯದಲ್ಲಿ ಪಕ್ಷದ ವತಿಯಿಂದ ಏನೇನು ಮಾಡ್ತಿದ್ದಾರೆ ನೋಡಲು ಬಂದಿದ್ದೇನೆ. ರೈತರ ಪರಿಸ್ಥಿತಿ ಹೇಗಿದೆ ಎಂಬುದನ್ನ ನೋಡಲು ಬಂದಿದ್ದೇನೆ. ಸರ್ಕಾರ ಲಾಕ್ಡೌನ್ ಬಗ್ಗೆ ನಮ್ಮ ಜೊತೆ ಏನ್ ಸಮಾಲೋಚನೆ ನಡೆಸಿಲ್ಲ. ಅವರು ನಮ್ಮನ್ನು ಏನಾದ್ರೂ ಕೇಳಿದ್ರೆ ಅಲ್ವಾ ನಾವು ಹೇಳೋದು. ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.
Advertisement
Advertisement
ಮಾಜಿ ಸಚಿವ ಬಸವರಾಜ ಶಿವಣ್ಣನವರ್ ಅಭಿಮಾನಿ ಬಗಳದ ವತಿಯಿಂದ ತಯಾರಿಸಿದ್ದ ಫುಡ್ ಕಿಟ್ ವಿತರಣೆ ಮಾಡಿದರು. ಸಾಮಾಜಿಕ ಅಂತರ ಮರೆತು ಡಿ.ಕೆ ಶಿವಕುಮಾರ್ ಹಾಗೂ ನಾಯಕರು ಫುಡ್ ಕಿಟ್ ವಿತರಣೆ ಮಾಡಿದರು.
Advertisement