ಬೆಂಗಳೂರು: ಲಾಕ್ಡೌನ್ ಮಾಡುವುದರಿಂದ ಕೊರೊನಾ ನಿಯಂತ್ರಣ ಆಗುವುದಿಲ್ಲ. ಹೀಗಾಗಿ ಲಾಕ್ಡೌನ್ ಮುಂದುವರಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟನೆ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಹೇಳುತ್ತಿದ್ದೇನೆ. ಲಾಕ್ಡೌನ್ ಮುಂದುವರಿಸಲ್ಲ, ಲಾಕ್ಡೌನ್ ಮಾಡುವುದರಿಂದ ಕೊರೊನಾ ನಿಯಂತ್ರಣ ಆಗುವುದಿಲ್ಲ. ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮಾರ್ಗ ಅಲ್ಲ. ಸ್ವಲ್ಪ ನಿಟ್ಟುಸಿರು ತೆಗೆದುಕೊಳ್ಳಬೇಕಿತ್ತು. ಈಗ ಎಲ್ಲರೂ ತೆಗೆದುಕೊಂಡಿದ್ದೀರಿ. ಮತ್ತೆ ಮತ್ತೆ ಲಾಕ್ಡೌನ್ ಮಾಡಿಕೊಂಡು ಹೋಗಲು ಆಗುವುದಿಲ್ಲ. ಒಂದು ವಾರ ಲಾಕ್ಡೌನ್ ಮುಗಿಯುತ್ತಿದ್ದಂತೆ ಎಂದಿನಿಂದ ಎಲ್ಲವೂ ಕೆಲಸಗಳು ಶುರುವಾಗುತ್ತದೆ ಎಂದರು.
Advertisement
Advertisement
ಒಂದು ತಿಂಗಳ ಮಗು ಅಮಾನವೀಯವಾಗಿ ಸಾವನಪ್ಪಿದೆ. ಸುರೇಶ್ ಕುಮಾರ್ ಅವರೇ ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಖಾಸಗಿ ಆಸ್ಪತ್ರೆಗಳಿಗೆ ಸೂಚನೆಯನ್ನು ಕೊಡಲು ಮುಖ್ಯಕಾರ್ಯದರ್ಶಿಗೆ ಹೇಳಿದ್ದೇವೆ. ಈ ರೀತಿಯ ಪ್ರಕರಣಗಳು ಮರುಕಳಿಸದ ರೀತಿ ಎಚ್ಚರಿಕೆ ವಹಿಸುತ್ತೇವೆ ಎಂದರು.
Advertisement
ಖಾಸಗಿ ಆಸ್ಪತ್ರೆಗಳು ಬೆಡ್ ಕೊಡುತ್ತಿಲ್ಲ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಬೆಡ್ ಸಿಗುತ್ತಿಲ್ಲ.ಹೀಗಾಗಿ ನಾಳೆ ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ನಡೆಸುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಲಕ್ಷಣ ಇಲ್ಲದವರನ್ನ ಕೂಡಲೇ ಡಿಸ್ಚಾರ್ಜ್ ಮಾಡಬೇಕು. ಕೆಲವು ಕಡೆ ರೋಗ ಲಕ್ಷಣ ಇಲ್ಲದಿದ್ದರೂ ಚಿಕಿತ್ಸೆ ಕೊಡುತ್ತಿದ್ದಾರೆ. ಹೀಗಾಗಿ ಬೆಡ್ಗಳು ನಿರೀಕ್ಷಿತ ಮಟ್ಟದಲ್ಲಿ ಕೊಡುತ್ತಿಲ್ಲ.
Advertisement
ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆ ಕುರಿತು 8 ವಲಯಗಳ ಉಸ್ತುವಾರಿಗಳೊಂದಿಗೆ ಇಂದು ಸಭೆ ನಡೆಸಲಾಯಿತು. ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ಆಗುತ್ತಿರುವ ತೊಡಕು ನಿವಾರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದು, ಹೆಚ್ಚಿನ ಪರೀಕ್ಷೆ ನಡೆಸುವುದೂ ಸೇರಿದಂತೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಸಚಿವರು, ಸಂಸದರು, ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/jMEubKfYU7
— B.S.Yediyurappa (@BSYBJP) July 17, 2020
ಯಾವುದೇ ರೋಗ ಲಕ್ಷಣ ಇಲ್ಲದಿರುವ ರೋಗಿಯನ್ನು ಆಸ್ಪತ್ರೆಯಲ್ಲಿ ಯಾವುದೇ ಕಾರಣ ಇಟ್ಟುಕೊಳ್ಳಬಾರದು ಎಂದು ಇಂದು ಸಂಜೆ ವೇಳೆಗೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅಧಿಕೃತ ಆದೇಶ ಹೊರಡಿಸುತ್ತಾರೆ ಎಂದು ತಿಳಿಸಿದರು.
ಕಂಟೈನ್ಮೆಂಟ್ ವಲಯಗಳಲ್ಲಿ ಹೆಚ್ಚು ಹೆಚ್ಚು ಟೆಸ್ಟ್ ಮಾಡುತ್ತೀವಿ. ಹೆಚ್ಚು ಟೆಸ್ಟ್ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಆಗಿದೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದರು.