ನೆಲಮಂಗಲ: ಲಾಕ್ಡೌನ್ ಮುಂಚಿತವಾಗಿ ತಮ್ಮ-ತಮ್ಮ ಊರಿಗೆ ತೆರಳಿದ್ದ ವಲಸಿಗರು, ಕಳೆದ ಕೆಲ ದಿನಗಳಿಂದ ರಾಜಧಾನಿಯತ್ತ ಮುಖ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರು ಹೊರವಲಯ ನೆಲಮಂಗಲ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ.
Advertisement
ನೆಲಮಂಗಲದ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಕಂಡುಬಂದಿದ್ದು, ಹಳ್ಳಿಯಿಂದ ಮತ್ತೆ ಜನ ಬೆಂಗಳೂರಿನತ್ತ ಬರುತ್ತಿದ್ದಾರೆ. ಸರ್ಕಾರದಿಂದ ಅನ್ಲಾಕ್ ಘೋಷಣೆ ಆಗದಿದ್ದರು ಕೂಡ ಜನ ಬೆಂಗಳೂರಿಗೆ ಬಂದು ಸೇರುತ್ತಿದ್ದಾರೆ. ಬೆಂಗಳೂರು, ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕಂಡು ಬರುತ್ತಿದ್ದು, ಬೆಳಗ್ಗೆ 10 ಗಂಟೆಯ ತನಕ ವಾಹನಗಳ ಭರಾಟೆ ಜೋರಾಗಿದೆ. 17 ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ನೆಲಮಂಗಲ ತಾಲೂಕು ಹೊಂದಿದ್ದು, ಊರಿಗೆ ತೆರಳಿದ್ದ ಜನರು ಹಳ್ಳಿಗಳಿಂದ ಲಗೇಜು, ಹೆಂಡತಿ ಮಕ್ಕಳ ಜೊತೆಗೆ ಬೆಂಗಳೂರು ನಗರದತ್ತ ಪಯಣ ಬೆಳೆಸಿದ್ದಾರೆ. ಇದನ್ನೂ ಓದಿ: ನೆಲಮಂಗಲ ಟೋಲ್ ಬಳಿ ಬಿರು ಬಿಸಿಲಲ್ಲಿ ಬಸ್ಗಾಗಿ ಕಾದು ಸುಸ್ತಾದ ಪ್ರಯಾಣಿಕರು
Advertisement
Advertisement
ಎಂಟನೇ ಮೈಲಿ ಬಳಿ ಬ್ಯಾರಿಕೇಡ್ ತಳ್ಳಿ ಹೋಗುತ್ತಿರುವ ವಾಹನ ಸವಾರರ ದೃಶ್ಯ ಬೆಳ್ಳಂ ಬೆಳಗ್ಗೆ ಕಂಡುಬಂದಿದೆ. 8ನೇ ಮೈಲಿ ಬಳಿ ಪೊಲೀಸರ ಚೆಕ್ ಪೊಸ್ಟ್ ಬ್ಯಾರಿಕೇಡ್ ಜಖಂ ಆಗಿದ್ದು, ವಾಹನ ದಟ್ಟಣೆ ಹಿನ್ನೆಲೆ ಬ್ಯಾರಿಕೇಡ್ ತಳ್ಳಿ ನಗರ ಪ್ರವೇಶ ಮಾಡುತ್ತಿರುವವರನ್ನು ಕಂಡರು ಕೂಡ ಪೊಲೀಸರು ಸುಮ್ಮನಾಗಿದ್ದಾರೆ. ಬಿದ್ದ ಬ್ಯಾರಿಕೇಡ್ ಸರಿಸಿ ಪೊಲೀಸರು ತಪಾಸಣೆ ಮಾಡದೇ ವಲಸಿಗರಿಗೆ ಸರಾಗ ಸಂಚಾರ ಮಾಡಿಕೊಟ್ಟಿದ್ದಾರೆ.
Advertisement