ನವದೆಹಲಿ: ಮಹಾಮಾರಿಯ ನಿಯಂತ್ರಣಕ್ಕಾಗಿ ಬಹುತೇಕ ರಾಜ್ಯಗಳು ಲಾಕ್ಡೌನ್, ನೈಟ್ ಕರ್ಫ್ಯೂ ಸೇರಿದಂತೆ ಕಠಿಣ ನಿಯಮಗಳನ್ನ ಜಾರಿಗೆಗೊಳಿಸಿ. ಈ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದ್ದರೂ ದೇಶದಲ್ಲಿ ಇಂದು ಸಹ ಕೊರೊನಾ ಸ್ಫೋಟಗೊಂಡಿದೆ. ಕಳೆದ 24 ಗಂಟೆಯಲ್ಲಿ 1,45,384 ಲಕ್ಷ ಕೊರೊನಾ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ ಕೊರೊನಾದಿಂದ 794 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ಬುಲೆಟಿನ್ ಬಿಡುಗಡೆಗೊಳಿಸಿದ್ದು, ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,32,05,926ಕ್ಕೇರಿಕೆಯಾಗಿದೆ. ನಿನ್ನೆ 77,567 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
India reports 1,45,384 new COVID19 cases, 77,567 discharges, and 794 deaths in the last 24 hours, as per the Union Health Ministry
Total cases: 1,32,05,926
Total recoveries: 1,19,90,859
Active cases: 10,46,631
Death toll: 1,68,436
Total vaccination: 9,80,75,160 pic.twitter.com/ed39ltrY7W
— ANI (@ANI) April 10, 2021
Advertisement
ಸದ್ಯ 10,46,631 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೃತರ ಸಂಖ್ಯೆ 1,68,436ಕ್ಕೆ ಏರಿದೆ. ಇದುವರೆಗೂ 9,80,75,160 ಜನ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಏಪ್ರಿಲ್ 9ರಂದು 11,73,219 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
The total number of samples tested up to April 9 is 25,52,14,803 including 11,73,219 samples tested yesterday: ICMR pic.twitter.com/3UY5wWQe03
— ANI (@ANI) April 10, 2021