– ಮಾಸ್ಕ್ ಧರಿಸದೇ ಕ್ರಿಕೆಟ್ ಆಡಿದ ಮನೋಜ್ ತಿವಾರಿ
ನವದೆಹಲಿ: ಕೇಂದ್ರ ಸರ್ಕಾರದ ಲಾಕ್ಡೌನ್, ಸಾಮಾಜಿಕ ಅಂತರ ನಿಯಮವನ್ನು ಉಲ್ಲಂಘಿಸಿ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಕ್ರಿಕೆಟ್ ಆಡಿದ್ದಾರೆ.
ಮನೋಜ್ ತಿವಾರಿ ಅವರು ಇತ್ತೀಚೆಗೆ ಹರ್ಯಾಣದ ಸೋನಿಪತ್ಗೆ ಭೇಟಿ ನೀಡಿದ್ದರು. ಈ ವೇಳೆ ಕ್ರಿಕೆಟ್ ಆಡಿದ್ದು, ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಾಯಕರ ನಡೆಯ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.
Advertisement
Haryana: BJP MP and Delhi BJP chief Manoj Tiwari played a game of cricket at an academy in Sheikhpura of Sonipat district today, in violation of social distancing and government guidelines for #CoronaLockdown. pic.twitter.com/jIZniQ8WUz
— ANI (@ANI) May 25, 2020
Advertisement
ಕೊರೊನಾ ವೈರಸ್ನಿಂದಾಗಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ. ಲಾಕ್ಡೌನ್ ಮಧ್ಯೆ ಕ್ರಿಕೆಟ್ ಆಡಿದ್ದಲ್ಲದೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೆ ಮನೋಜ್ ತಿವಾರಿ ಅವರು ಬೇಜವಾಬ್ದಾರಿ ಮೆರೆದಿದ್ದಾರೆ ಎಂದು ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಫೋಟೋ ಒಂದಲ್ಲಿ ಮನೋಜ್ ತಿವಾರಿ ಅವರು ಒಂದು ಸಣ್ಣ ಗುಂಪಿನ ಬಳಿ ನಿಂತು ಹಾಡನ್ನು ಹಾಡುವ ಮೂಲಕ ಆಟಗಾರರನ್ನು ರಂಜಿಸುತ್ತಿದ್ದರು. ಮತ್ತೊಂದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪೆವಿಲಿಯನ್ನಲ್ಲಿ ಕುಳಿತಿದ್ದನ್ನು ಕಾಣಬಹುದಾಗಿದೆ.
Advertisement
ईश्वर सबको खेल भावना से ओतप्रोत रखे.. सब स्वस्थ रहें.. सबकी immunity मज़बूत रहे.. pic.twitter.com/HagBN4Qc4F
— Manoj Tiwari ???????? (@ManojTiwariMP) May 24, 2020
ಈ ಘಟನೆಯ ವಿಡಿಯೋವನ್ನು ಸ್ವತಃ ಮನೋಜ್ ತಿವಾರಿ ಅವರೇ ತಮ್ಮ ಟ್ವೀಟ್ ಮಾಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಹಾಗೂ ನೆಟ್ಟಿಗರು ಸೋನಿಪತ್ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ
ಕೊರೊನಾ ದೇಶಾದ್ಯಂತ ವೇಗವಾಗಿ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6,977 ಮಂದಿಕೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 138,845ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.