ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದಾಗಿ ಅನೇಕ ಮದುವೆ, ಸಭೆ, ಸಮಾರಂಭಗಳು ಮುಂದೂಡಿಕೆಯಾಗಿವೆ. ಆದರೂ ಅನೇಕ ನಟ-ನಟಿಯರು ಸರಳವಾಗಿ ಮದುವೆಯಾಗಿದ್ದಾರೆ. ಇದೀಗ ಕಿರುತೆರೆ ನಟಿಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟಿ ಸುಪ್ರಿಯಾ ರಾವ್ ತಮ್ಮ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಪ್ರಿಯಾ ಎನ್ನುವುದಕ್ಕಿಂತ ‘ಮಗಳು ಜಾನಕಿ’ ಧಾರಾವಾಹಿಯ ನಟಿ ಸಂಜನಾ ಎಂದರೆ ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಸುಪ್ರಿಯಾ ರಾವ್ ಮಗಳು ಜಾನಕಿ ಧಾರಾವಾಹಿಯಲ್ಲಿ ಸಂಜನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸದ್ಯಕ್ಕೆ ಲಾಕ್ಡೌನ್ನಿಂದ ಯಾವುದೇ ಸೀರಿಯಲ್ ಪ್ರಸಾರವಾಗುತ್ತಿಲ್ಲ.
Advertisement
Advertisement
ಸುಪ್ರಿಯಾ ಅವರು ಮೂಲತಃ ಶಿವಮೊಗ್ಗದವರು. ಇವರು ತಮ್ಮ ಬಹುಕಾಲ ಗೆಳೆಯ ವಿಜಯ್ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರು ಪ್ರೀತಿಯ ವಿಚಾರವನ್ನು ಎರಡು ಕುಟುಂಬದಲ್ಲಿ ಹೇಳಿದ್ದಾರೆ. ನಂತರ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಅದರಂತೆಯೇ ಲಾಕ್ಡೌನ್ನಿಂದ ಸರಳವಾಗಿ ವಿವಾಹವಾಗಿದ್ದಾರೆ .
Advertisement
ಪತಿ ವಿಜಯ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ಮದುವೆ ಚಿತ್ರದುರ್ಗದಲ್ಲಿ ಗುರು-ಹಿರಿಯ ಸಮ್ಮುಖದಲ್ಲಿ ಸರಳವಾಗಿ ನಡೆದಿದೆ. ಲಾಕ್ಡೌನ್ನಿಂದಾಗಿ ಕೇವಲ ಆಪ್ತರು ಮತ್ತು ಸಂಬಂಧಿಕರು ಇವರ ಮದುವೆಯಲ್ಲಿ ಭಾಗಿಯಾಗಿದ್ದು, ನವ ಜೋಡಿಗೆ ಶುಭಾ ಹಾರೈಸಿದ್ದಾರೆ.
Advertisement