ನವದೆಹಲಿ: ಲಾಕ್ಡೌನ್ ನಿಂದಾಗಿ ಮನೆಯಲ್ಲಿಯೇ ಲಾಕ್ ಆಗಿದ್ದ ರೂಪದರ್ಶಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಪ್ರಿಯಾ ಉರ್ಫ್ ಭಾವನಾ ಆತ್ಮಹತ್ಯೆಗೆ ಶರಣಾದ ಯುವತಿ. ಲಾಕ್ಡೌನ್ ಮುಂಚೆ ಪ್ರಿಯಾ ಮುಂಬೈನಲ್ಲಿ ವಾಸವಾಗಿದ್ದು, ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಕಳೆದ ಎರಡು ಬಾರಿಯೂ ಲಾಕ್ಡೌನ್ ಘೋಷಣೆ ಆಗಿದ್ದರಿಂದ ತನ್ನ ವೃತ್ತಿಜೀವನದ ಕುರಿತು ಪ್ರಿಯಾ ಚಿಂತೆಯಲ್ಲಿದ್ದರು.
Advertisement
Advertisement
ಈ ಬಾರಿ ಲಾಕ್ಡೌನ್ ಘೋಷಣೆಯಾದಾಗ ಪ್ರಿಯಾ ಗ್ರೇಟರ್ ನೋಯ್ಡಾದಲ್ಲಿರುವ ಸೋದರಿ ಬಳಿ ಬಂದು, ಅಲ್ಲಿಯೇ ಉಳಿದುಕೊಂಡಿದ್ದರು. ಆದ್ರೆ ಪ್ರಿಯಾ ಕೆರಿಯರ್ ಕುರಿತು ಚಿಂತಿಸಿ ಖಿನ್ನತೆಗೊಳಗಾಗಿದ್ದರು. ಇದನ್ನೂ ಓದಿ: ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್ಗೆ ಇರಿಸು ಮುರಿಸು
Advertisement
Advertisement
ಸೋಮವಾರ ರಾತ್ರಿ ಬಾಲ್ಕನಿಗೆ ಬಂದ ಪ್ರಿಯಾ 14ನೇ ಮಹಡಿಯಿಂದ ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಪ್ರಿಯಾಳನ್ನ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪ್ರಿಯಾ ಸಾವನ್ನಪ್ಪಿರೋದನ್ನು ಖಚಿತ ಪಡಿಸಿದ್ದಾರೆ. ಮನೆಯಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ನೀವು ಬೇಜಾರ್ ಮಾಡ್ಕೋಬೇಡಿ – ಗೇಮ್ ಪ್ಲ್ಯಾನ್ ಬಗ್ಗೆ ಅರವಿಂದ್ ಮಾತು