ರಾಯಪುರ: ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರ ಘೋಷಿಸಿದೆ. ಈ ಮಧ್ಯೆ ಛತ್ತಿಸ್ ಗಢ್ ನ ಬಿಜಾಪುರದ ಒಂದು ಸಣ್ಣ ಪಟ್ಟಣದಲ್ಲಿ ಲಸಿಕೆ ಪಡೆಯುವಂತೆ ಜನರನ್ನು ಉತ್ತೇಜಿಸಲು ಹೊಸ ರೀತಿಯ ವಿಭಿನ್ನ ತಂತ್ರವನ್ನು ಅನುಸರಿಸಿದ್ದಾರೆ.
Advertisement
ಹೌದು. ಲಸಿಕೆ ಕೇಂದ್ರಗಳಿಗೆ ವ್ಯಾಕ್ಸಿನ್ ಪಡೆಯಲು ಬರುವವರಿಗೆ ಟೊಮೆಟೋ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಫೋಟೋದಲ್ಲಿ ಅನೇಕ ಮಹಿಳೆಯರು ವ್ಯಾಕ್ಸಿನ್ ಪಡೆದು ಲಸಿಕೆ ಕೇಂದ್ರದಿಂದ ಹೊರಬರುತ್ತಿರುವ ವೇಳೆ ಕವರ್ನಲ್ಲಿ ಟೊಮೆಟೋ ಹಿಡಿದುಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ.
Advertisement
ಈ ಕುರಿತಂತೆ ಪುರುಷೋತ್ತಮ್ ಎಂಬ ಅಧಿಕಾರಿಯೊಬ್ಬರು, ಇಂಜೆಕ್ಷನ್ ಪಡೆಯಲು ಸ್ಥಳೀಯರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ತಂತ್ರವನ್ನು ಉಪಯೋಗಿಸಲಾಗಿದೆ. ನಾವು ತರಕಾರಿ ಮಾರಾಟಗಾರರಿಗೆ ಮನವಿ ಮಾಡಿದ್ದೆವು, ಬಳಿಕ ಅವರು ಪುರಸಭೆಗರೆ ಸರಬರಾಜು ಮಾಡಿದರು ಎಂದು ತಿಳಿಸಿದ್ದಾರೆ.
Advertisement
Chhattisgarh: Tomatoes being offered to people in Bijapur Municipal limits, by Municipality, to encourage them to get vaccinated for #COVID19. An official, Purshottam Sallur says, “It’s being done to encourage them. We appealed to vegetable vendors, they supplied to municipality” pic.twitter.com/3LHPKfm6Mr
— ANI (@ANI) April 20, 2021
Advertisement
ಈ ವಿಚಾರವಾಗಿ ನೆಟ್ಟಿಗರು ಬಿಜಾಪುರ ಪಟ್ಟಣದಲ್ಲಿ ನಡೆಸುತ್ತಿರುವ ಈ ಕಾರ್ಯಕ್ಕೆ ಮೆಚ್ಚುಗೆ ಜೊತೆಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ಕಾರ್ಯವನ್ನು ಸರ್ಕಾರ ಕೂಡ ಅನುಸರಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.