ಕೋಲ್ಕತ್ತಾ: ಬಾಲಿವುಡ್ ನಟಿ ಕಮ್ ರಾಜಕಾರಣಿ ಜಯಾ ಬಚ್ಚನ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿ ಶುಕ್ರವಾರ ಹೌರದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ನೆಚ್ಚಿನ ನಟಿ ಜಯಾ ಬಚ್ಚನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಯನ್ನು ದೂಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಮೊದಲಿನಿಂದಲೂ ಫೋಟೋ ಹಿಡಿದುಕೊಳ್ಳುವುದೆಂದರೆ ಜಯಾ ಬಚ್ಚನ್ಗೆ ಇಷ್ಟವಾಗುವುದಿಲ್ಲ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಅದರಲ್ಲೂ ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸಿಕೊಳ್ಳುವವರೆಂದರೆ ಇನ್ನೂ ಇಷ್ಟವಾಗುವುದಿಲ್ಲ. ಈ ಹಿಂದೆ ಹಲವು ಪತ್ರಕರ್ತರು, ಛಾಯಾಗ್ರಹಕರು, ಅಭಿಮಾನಿಗಳ ವಿರುದ್ಧ ಇದೇ ವಿಚಾರವಾಗಿ ಕಿಡಿಕಾರಿದ್ದಾರೆ.
Advertisement
Advertisement
ಸದ್ಯ ಇತ್ತೀಚೆಗೆ ನಡೆಸಿದ ರ್ಯಾಲಿ ವೇಳೆ ವ್ಯಕ್ತಿಯೋರ್ವ ಜಯಾ ಬಚ್ಚನ್ ಜೊತೆ ಫೋನ್ ಮೂಲಕ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಟ್ರೈ ಮಾಡಿದ್ದಾನೆ. ಈ ವೇಳೆ ಜಯಾ ಬಚ್ಚನ್ ವ್ಯಕ್ತಿಯ ತಲೆಯನ್ನು ತಳ್ಳಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದು ಅಸಭ್ಯಕರ ವರ್ತನೆ ಹಾಗೂ ಅವಮಾನಕರ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Advertisement
Jaya Bachchan Pushes & Shove a citizen who was just taking a selfie with her and TMC candidate. pic.twitter.com/76vVqBhLnZ
— Rishi Bagree ???????? (@rishibagree) April 8, 2021
ಮತ್ತೆ ಕೆಲವರು ಇದೇ ರೀತಿ ಪುರುಷ ರಾಜಕಾರಣಿಗಳು ಮಹಿಳೆಯರಿಗೆ ಮಾಡಿದ್ದರೆ, ಈ ಘಟನೆ ಹೆಚ್ಚು ಸುದ್ದಿಯಾಗುತ್ತಿತ್ತು ಎಂದು ಕಮೆಂಟ್ ಮಾಡಿದ್ದಾರೆ.