ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಜೂನ್ 1ರಿಂದ ನಾನ್ ಎಸಿ ರೈಲು ಸಂಚಾರ ನಡೆಸಲು ನಿರ್ಧರಿಸಿದೆ.
ಜೂನ್ 1ರಿಂದ ದೇಶಾದ್ಯಂತ 200 ನಾನ್ ಎಸಿ ರೈಲುಗಳು ಸಂಚಾರ ನಡೆಸಲಿವೆ. ನಿಗದಿಯ ವೇಳಾಪಟ್ಟಿಯಂತೆ ರೈಲುಗಳ ಓಡಾಟ ನಡೆಯಲಿದ್ದು, ಶೀಘ್ರದಲ್ಲಿಯೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಗೊಳ್ಳಲಿದೆ ಎಂದು ರೈಲ್ವೇ ಇಲಾಖೆ ಟ್ವಿಟ್ಟರ್ ನಲ್ಲಿ ತಿಳಿಸಿದೆ.
Advertisement
इन श्रमिक स्पेशल ट्रेनों के अतिरिक्त भारतीय रेल 1 जून से प्रतिदिन 200 अतिरिक्त टाइम टेबल ट्रेनें चलाने जा रहा है जो कि गैर वातानुकूलित द्वितीय श्रेणी की ट्रेन होंगी एवं इन ट्रेनों की बुकिंग ऑनलाइन ही उपलब्ध होगी। ट्रेनों की सूचना शीघ्र ही उपलब्ध कराई जाएगी।#IndiaFightCorona
— Ministry of Railways (@RailMinIndia) May 19, 2020
Advertisement
ಮತ್ತೊಂದು ಟ್ವೀಟ್ ನಲ್ಲಿ, ಮುಂದಿನ ದಿನಗಳಲ್ಲಿಯೂ ಶ್ರಮಿಕ ರೈಲುಗಳು ಸಂಚಾರ ನಡೆಸಲಿವೆ. ಇದುವರೆಗೂ 1600 ರೈಲುಗಳ ಮೂಲಕ ಸುಮಾರು 21.5 ಲಕ್ಷ ಕಾರ್ಮಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಪ್ರವಾಸಿ ಕಾರ್ಮಿಕರಿಗೆ ಎರಡು ದಿನಗಳಲ್ಲಿ ಹೆಚ್ಚು ಶ್ರಮಿಕ ರೈಲುಗಳು ಸಂಚಾರ ನಡೆಸಲಿ ಎಂಬ ಮಾಹಿತಿಯನ್ನು ನೀಡಿದೆ.
Advertisement
Advertisement
ಹೊಸ ಆದೇಶದ ಅನುಗುಣವಾಗಿ ಶ್ರಮಿಕ ವಿಶೇಷ ರೈಲುಗಳಿಗೆ ರಾಜ್ಯಗಳ ಅನುಮತಿ ಪಡೆಯುವಂತಿಲ್ಲ. ಪ್ರವಾಸಿ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದು ಭಾರತೀಯ ರೈಲ್ವೇ ವಕ್ತಾರ ರಾಜೇಶ್ ಬಾಜಪೇಯಿ ಹೇಳಿದ್ದಾರೆ.