ಮುಂಬೈ: ರೈಲಿನ ಹಳಿ ಮೇಲೆ ಆಯ ತಪ್ಪಿ ಬಿದ್ದ ಮಗು. ಎದುರಿನಲ್ಲಿ ಶರವೇಗದಲ್ಲಿ ಬರುತ್ತಿದ್ದ ರೈಲಿನಿಂದ ಮಗುವಿನ ಪ್ರಾಣ ಉಳಿಸುವ ರೈಲ್ವೆ ನೌಕರನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಮುಂಬೈನ ವಂಗನಿ ರೈಲು ನಿಲ್ದಾಣದ ಎರಡನೇ ಪ್ಲಾಟ್ಫಾರ್ಮ್ನಲ್ಲಿ ಮಹಿಳೆ ಮತ್ತು ಮಗು ನಡೆದುಕೊಂಡು ಹೋಗುತ್ತಿದ್ದಾಗ ಮಗು ಆಯ ತಪ್ಪಿ ಹಳಿ ಮೇಲೆ ಬಿದ್ದಿದೆ. ಎದುರಿನಿಂದ ರೈಲು ಅತ್ಯಂತ ವೇಗವಾಗಿ ಮಗು ಬಿದ್ದ ಹಳಿ ಮೇಲೆಯೇ ಬರುತ್ತಿತ್ತು. ಮಗುವಿನ ಜೊತೆಗೆ ಇದ್ದ ಮಹಿಳೆ ಭಯಗೊಂಡು ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಭಯದಿಂದ ಮಗುವನ್ನು ಕಾಪಾಡಲು ನೋಡುತ್ತಿದ್ದರು.
Advertisement
#WATCH | Maharashtra: A pointsman in Mumbai Division, Mayur Shelkhe saves life of a child who lost his balance while walking at platform 2 of Vangani railway station & fell on railway tracks, while a train was moving in his direction. (17.04.2021)
(Video source: Central Railway) pic.twitter.com/6bVhTqZzJ4
— ANI (@ANI) April 19, 2021
Advertisement
ಮಗು ಹಳಿ ಮೇಲೆ ಬಿದ್ದಿರುವುದನ್ನು ಕಂಡು ರೈಲು ನಿಲ್ದಾಣದ ಕೆಲಸಗಾರ ಮಯೂರ್ ಶೆಲ್ಕೆ ಮಿಂಚಿನ ವೇಗದಲ್ಲಿ ಓಡಿ ಮಗುವನ್ನು ಎತ್ತಿ ಪ್ಲಾಟ್ಫಾರ್ಮ್ ಮೇಲೆ ಹಾಕಿದರು. ರೈಲು ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪ್ಲಾಟ್ಫಾರ್ಮ್ ಮೇಲೆ ಹಾರಿ ತಮ್ಮ ಪ್ರಾಣ ಹಾಗೂ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.
Advertisement
A Good Samaritan:
At Vangani station of Central Railway, Pointsman Mr. Mayur Shelkhe saved the life of a child just in the nick of the time. He risked his life to save the life of the child.
We salute his exemplary courage & utmost devotion to the duty. pic.twitter.com/V6QrxFIIY0
— Ministry of Railways (@RailMinIndia) April 19, 2021
Advertisement
ಈ ಘಟನೆಯ ವಿಡಿಯೋವನ್ನು ಕೇಂದ್ರ ರೈಲ್ವೇ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಮಗುವಿನ ಜೀವ ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ನೌಕರನ ಧೈರ್ಯ ಮತ್ತು ಕರ್ತವ್ಯದ ಬಗ್ಗೆ ಅತ್ಯಂತ ಭಕ್ತಿಗೆ ನಮಸ್ಕರಿಸುತ್ತೇವೆ. ನೌಕರನಿಗೆ ಅಭಿನಂದನೆಗಳು ಎಂದು ಬರೆದುಕೊಂಡು ವೀಡಿಯೋವನ್ನು ಶೇರ್ ಮಾಡಿದೆ.