ಕೊಪ್ಪಳ: ಹಣ್ಣುಗಳನ್ನು ಬೆಳೆದು ಮಾರಾಟ ಮಾಡಲು ಆಗದ ರೈತರಿಂದ ಹಣ್ಣುಗಳನ್ನು ಖರೀದಿಸಿ ಉಚಿತವಾಗಿ ಉದ್ಯಮಿ ಕಳಕನಗೌಡ್ರು ಕೊರೊನಾ ಸೋಂಕಿತರಿಗೆ ನೀಡುತ್ತಿದ್ದಾರೆ.
Advertisement
ಹಣ್ಣುಗಳನ್ನು ಬೆಳೆದು ಮಾರಾಟ ಮಾಡಲು ಆಗದ ರೈತರಿಂದ ಹಣ್ಣುಗಳನ್ನು ಖರೀದಿಸಿ ಇದೇ ಹಣ್ಣುಗಳನ್ನು ಗ್ರಾಮ ಗ್ರಾಮಗಳಿಗೆ ಹಂಚುತ್ತಿದ್ದಾರೆ. ಬಸವ ಜಯಂತಿಯಿಂದ ಆರಂಭಿಸಿ ಇಲ್ಲಿಯವರೆಗೂ ಹಣ್ಣುಗಳನ್ನು ವಿತರಿಸುತ್ತಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದವರಾಗಿರುವ ಕಳಕನಗೌಡ ಕಲ್ಲೂರು ಅವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್
Advertisement
Advertisement
ಕೃಷಿಯೊಂದಿಗೆ ಗ್ರಾನೈಟ್ ಉದ್ಯಮ ಮಾಡುತ್ತಿರುವ ಕಳಕನಗೌಡರು ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಮಹಾಮಾರಿ ಕೊರೊನಾ ಅಬ್ಬರಿಸಲು ಆರಂಭವಾಗಿರುವ ಹಿನ್ನಲೆಯಲ್ಲಿ ಜನತಾ ಕಫ್ರ್ಯೂ, ಲಾಕ್ಡೌನ್ ಜಾರಿಯಾಗಿದೆ. ಈ ಸಂದರ್ಭದಲ್ಲಿ ಹಣ್ಣು ಬೆಳೆದ ಬೆಳೆಗಾರರು ಹಣ್ಣುಗಳ ಮಾರಾಟ ಮಾಡಲು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಲಾಕ್ಡೌನ್ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡ್ತಾರೆ: ಬೊಮ್ಮಾಯಿ
Advertisement
ಬೆಳೆಗಾರರ ಬಳಿ ಕಳಕನಗೌಡರು ಹಣ್ಣುಗಳನ್ನು ಖರೀದಿಸಿ ಇದೇ ಹಣ್ಣುಗಳನ್ನು ಹಳ್ಳಿ ಹಳ್ಳಿಗೆ ಹಂಚುತ್ತಿದ್ದಾರೆ. ಬಾಳೆ, ಮಾವು, ಅನಾನಸ್ ಸೇರಿದಂತೆ ವಿವಿಧ ಹಣ್ಣುಗಳು ತೋಟದಲ್ಲಿಯೇ ಮಾರಾಟ ಮಾಡಲು ಆಗದೆ ಇರುವ ರೈತರು ಸಂಪರ್ಕಿಸಿದರೆ ಅಲ್ಲಿರುವ ಹಣ್ಣುಗಳನ್ನು ಖರೀದಿಸಿ ಗ್ರಾಮ ಗ್ರಾಮಗಳಿಗೆ ಹಂಚುತ್ತಿದ್ದಾರೆ. ಇಂದು ಕೊಪ್ಪಳ ಗವಿಮಠಕ್ಕೆ ರೈತರಿಂದ ಖರೀದಿಸಿ ಬಾಳೆ ಹಾಗು ಮಾವಿನ ಹಣ್ಣನ್ನು ಸಮರ್ಪಿಸಿದರು, ಕೊಪ್ಪಳ ಗವಿಮಠದಿಂದ 300 ಜನರಿಗೆ ಸೋಂಕಿತರಿಗಾಗಿ ಆರಂಭಿಸಿರುವ ಕೊರೊನಾ ಆಸ್ಪತ್ರೆ, ಕೇರ್ ಸೆಂಟರ್ ಮತ್ತು ಮಠದಿಂದ ನಗರದ ವಿವಿಧೆಡೆ ವಿತರಿಸಲು ಎರಡು ವಾಹನಗಳಲ್ಲಿ ಹಣ್ಣುಗಳನ್ನು ನೀಡಿದ್ದಾರೆ. ಸಂಕಷ್ಟ ಸಂದರ್ಭದಲ್ಲಿ ನೆರವಾಗಬೇಕು ಎನ್ನುವ ಕಾರಣಕ್ಕೆ ಹಣ್ಣುಗಳನ್ನು ಖರೀದಿಸಿ ಜನರಿಗೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.