ಬೆಂಗಳೂರು: ನಾಳೆ ಸಿಲಿಕಾನ್ ಸಿಟಿಯಲ್ಲಿ ನಡೆಯುವ ರೈತರ ರ್ಯಾಲಿ ಶಾಂತಿ ಮತ್ತು ಶಿಸ್ತಿನಿಂದ ನಡೆಯುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್ ರ್ಯಾಲಿ ಕುರಿತಾಗಿ ಮಾತನಾಡಿದ ಅವರು, ರೈತರ ರ್ಯಾಲಿಯನ್ನು ಪೊಲೀಸರು ಅಡ್ಡಿಪಡಿಸುವ ಕೆಲಸ ಆಗಲ್ಲ. ಶಾಂತಿ ಮತ್ತು ಶಿಸ್ತಿಗೆ ಅವಕಾಶ ನೀಡಬೇಕು. ಟ್ರ್ಯಾಕ್ಟರ್ ಸಂಖ್ಯೆ, ಬೇರೆ ವಾಹನಗಳ ಸಂಖ್ಯೆ, ಜನರ ಸಂಖ್ಯೆ ಕಡಿಮೆ ಮಾಡಿಕೊಳ್ಳಿ ಎಂದು ಪೊಲೀಸ್ ಇಲಾಖೆಯವರು ತಿಳಿಸಿದ್ದಾರೆ ಎಂದಿದ್ದಾರೆ.
ನೈಸ್ ಜಂಕ್ಷನ್ ಮಾದಾವರದಿಂದ ಪರೇಡ್ 20 ಸಾವಿರ ರೈತರು, 8 ಹತ್ತು ಸಾವಿರ ವಾಹನಗಳ ಬಳಕೆ ಸಾಧ್ಯತೆ ಇದೆ. ಬೆಂಗಳೂರಿನ ಸುತ್ತ ಮುತ್ತಲಿನ ಜಿಲ್ಲೆಗಳ ರೈತರು ಕೂಡ ಭಾಗಿಯಾಗಲಿದ್ದಾರೆ. ರಾಜ್ಯಪಾಲರ, ಸಿಎಂ ಧ್ವಜಾರೋಹಣ ಆದ ನಂತರ ನೈಸ್ ಜಂಕ್ಷನ್ನಿಂದ ನಮ್ಮ ರ್ಯಾಲಿ ಪ್ರಾರಂಭವಾಗಲಿದೆ. ಗೊರಗುಂಟೆಪಾಳ್ಯ, ಯಶವಂತಪುರ, ಮಲ್ಲೇಶ್ವರಂ, ಶೆಷಾದ್ರಿಪುರಂ ಮಾರ್ಗವಾಗಿ ನಡೆಯುತ್ತದೆ. ರಾಷ್ಟ್ರ ಧ್ವಜಕ್ಕೆ ಗೌರವವನ್ನು ಸಲ್ಲಿಸಿ ಈ ರ್ಯಾಲಿ ಪ್ರಾರಂಭವಾಗುತ್ತದೆ. ಕಲ್ಲು ಹೊಡೆಯುವುದು, ಕಚೇರಿ ನುಗ್ಗುವುದು, ಗಲಾಟೆ ಇಂಹದ್ದು ಇರುವುದಿಲ್ಲ. ಶಿಸ್ತು ಬದ್ಧವಾಗಿ ರೈತರ ಪರೇಡ್ ನಡೆಯುತ್ತದೆ.
ಪೊಲೀಸರು ತಡೆದ್ರೆ ಉಗ್ರ ಹೊರಾಟ ನಡೆಸುತ್ತೇವೆ. ಪೊಲೀಸರು ತಡೆದರೆ ಬೆಂಗಳೂರು ಲಾಕ್ ಬೆಂಗಳೂರು ಪ್ರವೇಶ ಆಗದಂತೆ ಲಾಕ್ ಮಾಡುತ್ತೇವೆ. ನಾಳೆ ಪರೇಡ್ ತಡೆದರೆ ರೈತರ ಹೋರಾಟ ನಿರಂತರವಾಗಿ ದೆಹಲಿಯಂತೆ ನಡೆಯಲಿದೆ. ಹೀಗಾಗಿ ತಡೆಯುವುದಿಲ್ಲ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ.