ನವದೆಹಲಿ: ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಟೆಂಟ್ ಮೇಲೆ ಸ್ಥಳೀಯರು ಕಲ್ಲು ತೂರಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
Advertisement
Advertisement
ಸಿಂಘು ಗಡಿಯಲ್ಲಿ ಎರಡು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದ ರೈತರ ವಿರುದ್ಧ ಸ್ಥಳೀಯರು ನಡೆಸಿದ ಕಲ್ಲು ತೂರಾಟದಿಂದ ರೈತರು ಮತ್ತು ಸ್ಥಳೀಯರ ನಡುವೆ ಮಾರಾಮಾರಿ ನಡೆದಿದೆ. ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮುಸುಕುಧಾರಿ ಸ್ಥಳೀಯರು ಟೆಂಟ್ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಕೆರಳಿದ ರೈತರ ತಂಡ ಖಡ್ಗವನ್ನು ಹಿಡಿದು ಹೋರಾಟಕ್ಕೆ ಮುಂದಾಗಿದೆ. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
Advertisement
Advertisement
ಸ್ಥಳೀಯ ನಿವಾಸಿಗಳೆಂದು ಹೇಳಿಕೊಂಡಿರುವ 200ಕ್ಕೂ ಹೆಚ್ಚು ಮಂದಿಯಿಂದ ಪೊಲೀಸರ ಎದುರೆ ರೈತರ ಟೆಂಟ್ ಮೇಲೆ ಕಲ್ಲು ತೂರಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳೀಯರನ್ನು ಸ್ಥಳದಿಂದ ಚದುರಿಸಲು ಲಾಠಿಪ್ರಹಾರ ನಡೆಸಿದ್ದಾರೆ. ಆದರು ಗುಂಪು ಚದುರದೆ ಇದ್ದಾಗ ಅಶ್ರುವಾಯು ಪ್ರಯೋಗಿಸಿದ್ದಾರೆ. ಘಟನೆಯಲ್ಲಿ ಹಲವು ಪೊಲೀಸರಿಗೆ ಗಾಯಗಳಾಗಿವೆ. ಇನ್ನೂ ಘಟನೆ ಸಂದರ್ಭ ಮೇಲೆ ಖಡ್ಗದಿಂದ ಹಲ್ಲೆ ಮಾಡಲು ಮುಂದಾದ ಪ್ರತಿಭಟನಾಕಾರನನ್ನು ಪೊಲೀಸರು ಬಂಧಿಸಿದ್ದಾರೆ.
#WATCH | Delhi: Group of people claiming to be locals gather at Singhu border (Delhi-Haryana border) demanding that the area be vacated. pic.twitter.com/AHGBc2AuXO
— ANI (@ANI) January 29, 2021
ಕೆಳ ದಿನಗಳ ಹಿಂದೆ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಕೆಂಪುಕೋಟೆಯ ಮೇಲೆ ರೈತರು ನಡೆಸಿದ ಘರ್ಷಣೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ನಡೆದಿರುವುದು ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತಿರುಗುವಂತಾಗಿದೆ.