ನವದೆಹಲಿ: ಸರ್ಕಾರ ರೈತರ ಪರವಾಗಿದ್ದು, ಅವರ ಅಭಿವೃದ್ಧಿಗೆ ಪ್ರತಿಬದ್ಧವಾಗಿದೆ ಎಂದ ವಿತ್ತ ಸಚಿವರು ಅನ್ನದಾತರ ಆದಾಯ ಹೆಚ್ಚಳಕ್ಕೆ ಕೆಲವು ಸೂತ್ರಗಳನ್ನ ಘೋಷಣೆ ಮಾಡಿದರು.
ಸರ್ಕಾರ 2022ರೊಳಗೆ ರೈತರ ಆದಾಯವನ್ನ ದ್ವಿಗುಣಗೊಳಿಸುವ ಕಾರ್ಯದಲ್ಲಿ ಯಶಸ್ಸಿನ ಹೆಜ್ಜೆ ಇರಿಸಿದೆ. ಪ್ರಧಾನಿಗಳು 8 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತ ಗ್ಯಾಸ್ ನೀಡಿದ್ದಾರೆ. 4 ಕೋಟಿಗೂ ಅಧಿಕ ರೈತ, ಮಹಿಳೆಯರು ಮತ್ತು ಬಡವರ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.
Advertisement
Advertisement
2013-14ರಲ್ಲಿ ಸರ್ಕಾರ ಗೋಧಿ ಖರೀದಿಗಾಗಿ 33 ಸಾವಿರ ಕೋಟಿ ರೂ. ಖರ್ಚು ಮಾಡಿತ್ತು. 2019ರಲ್ಲಿ 63 ಸಾವಿರ ಕೋಟಿ ರೂ. ಖರೀದಿಸಿದ್ರೂ ಅದು 75 ಸಾವಿರ ಕೋಟಿಗೆ ಏರಿಕೆಯಾಯ್ತು. 2020-21ರಲ್ಲಿ 43 ಲಕ್ಷ ರೈತರಿಗೆ ಇದರ ಲಾಭ ಪಡೆದಿದ್ದಾರೆ.
Advertisement
Advertisement
ಧಾನ್ಯಗಳ ಖರೀದಿಗೆ ಸರ್ಕಾರ 2013-14ರಲ್ಲಿ 63 ಸಾವಿರ ಕೋಟಿ ಖರ್ಚು ಮಾಡಿತ್ತು. ಆದ್ರೆ 1 ಲಕ್ಷ 45 ಸಾವಿರ ಕೋಟಿಗೆ ಏರಿಕೆ ಆಯ್ತು. ಈ ವರ್ಷ ಧಾನ್ಯ ಖರೀದಿಯ ಮೊತ್ತ 1.72 ಲಕ್ಷ ಕೋಟಿಗೆ ಏರಿಕೆಯಾಗುವ ಸಾಧ್ಯತೆಗಳಿವೆ. ಕಳೆದ ಬಾರಿ 1.2 ಕೋಟಿ ರೈತರಿಗೆ ಧಾನ್ಯ ಖರೀದಿಯಿಂದ ಲಾಭವಾಗಿತ್ತು. ಈ ವರ್ಷ ಸುಮಾರು 1.5 ಕೋಟಿ ರೈತರು ಲಾಭ ಪಡೆಯಲಿದ್ದಾರೆ. ಇದನ್ನೂ ಓದಿ: ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ
2014ರಲ್ಲಿ ಬೇಳೆ ಖರೀದಿಗಾಗಿ 236 ಕೋಟಿ ರೂ. ವ್ಯಯಿಸಲಾಗಿತ್ತು. ಈ ವರ್ಷ ಸರ್ಕಾರ 10 ಸಾವಿರ 500 ಕೋಟಿಯಷ್ಟು ಬೇಳೆ ಖರೀದಿಸಲಿದೆ. ಈ ಖರೀದಿ ಶೇ.40 ರಷ್ಟು ಏರಿಕೆ. ಎಂಎಸ್ಪಿ ಒಂದೂವರೆ ಪಟ್ಟು ಹೆಚ್ಚಿಸಲಾಗುವುದು ಹಾಗೂ ಸರ್ಕಾರ ಅನ್ನದಾತರ ಅಭಿವೃದ್ಧಿಗೆ ಬದ್ಧವಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ 6,500 ಕಿ.ಮೀ ಹೆದ್ದಾರಿ ನಿರ್ಮಾಣ
ಈ ವರ್ಷ ಸ್ವಾಮಿತ್ವ ಸ್ಕೀಂ ಆರಂಭಿಸಲಾಗಿದ್ದು, ಇದುವರೆಗೂ 1.8 ಲಕ್ಷ ಜನಕ್ಕೆ ಕಾರ್ಡ್ ಲಭ್ಯವಾಗಿದೆ. 2021ರೊಳಗೆ ಪ್ರತಿ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗಾಗಿ ಒಂದು ಪೋರ್ಟಲ್ ರಚನೆ ಮಾಡಲಾಗವುದು. ಕಟ್ಟಡ ನಿರ್ಮಾಣದಲ್ಲಿ ತೊಡಗುವ ಕಾರ್ಮಿಕರಿಗೆ ಆರೋಗ್ಯ, ವಸತಿ ಮತ್ತು ಆಹಾರ ಸ್ಕೀಂ ಆರಂಭಿಸಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಚುನಾವಣೆ ನಡೆಯುಲಿರುವ ರಾಜ್ಯಗಳಿಗೆ ಬಂಪರ್ ಯೋಜನೆಗಳು