ಬೆಂಗಳೂರು: ನನ್ನ ವಿರುದ್ಧ ರೇಪ್ ಕೇಸ್ ಹಾಕಿದ್ರೂ ಎದುರಿಸಲು ಸಿದ್ಧ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
Advertisement
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ವೀಡಿಯೋ ಬಿಡುಗಡೆ ಮಾಡಿದ ಬೆನ್ನಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇನ್ನೂ ಹತ್ತು ವೀಡಿಯೋ ಬರಲಿ ನಾನು ಹೇದರಲ್ಲ, ರೇಪ್ ಕೇಸ್ ಹಾಕಿದರು ಕೂಡ ನಾನು ಎದುರಿಸಲು ಸಿದ್ಧನಿರುವುದಾಗಿ ಗುಡುಗಿದ್ದಾರೆ.
Advertisement
Advertisement
ಸಿಡಿ ವಿಚಾರವಾಗಿ ನಾನು ಮೆಂಟಲಿ ರೆಡಿಯಾಗಿದ್ದೇನೆ. ಕಾನೂನು ಹೋರಾಟಕ್ಕೂ ಸಿದ್ಧವಾಗಿದ್ದೇನೆ. ಇದು ದೊಡ್ಡ ಸಮಸ್ಯೆಯಲ್ಲ ಎಂದು ತಿಳಿಸಿದ್ದಾರೆ.
Advertisement
ಸಂತ್ರಸ್ತೆ ವಕೀಲರ ಮೂಲಕ ದೂರು ಕೊಡಲು ಬರಲಿ, ನನ್ನ ಬಳಿಯೂ ವಕೀಲರಿದ್ದಾರೆ. ನಾನು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಿಲ್ಲ. ರೇಪ್ ಕೇಸ್ ಹಾಕುವುದಾದರೆ ಹಾಕಲಿ ನಾನು ಅದನ್ನು ಎದುರಿಸಲು ಕೂಡ ರೆಡಿಯಾಗಿದ್ದೇನೆ. ಸಂತ್ರಸ್ತೆ ದೂರು ಅಂದೇ ಕೊಡಬೇಕಾಗಿತ್ತು ಆದರೆ ಕೊಟ್ಟಿರಲಿಲ್ಲ. ಇದು ಮಹಾಷಡ್ಯಂತ್ರ ಎಂದು ಹೇಳಿದ್ದೆ. ನಾನು ಜಾಮೀನು ತೆಗೆದುಕೊಳ್ಳುವುದಿಲ್ಲ ಮುಂದೆ ಏನಾಗುತ್ತದೆ ನೋಡೋಣ ಎಂದರು.
ಇಂದು ಮೂರನೇ ವೀಡಿಯೋ ಹೇಳಿಕೆ ಬಿಡುಡಗೆ ಮಾಡಿರುವ ಸಿಡಿ ಲೇಡಿ, ಕರ್ನಾಟಕದ ಜನತೆ, ತಂದೆ-ತಾಯಿಯರ ಆಶೀರ್ವಾದ, ಎಲ್ಲಾ ಪಕ್ಷದ ನಾಯಕರು ಹಾಗೂ ಎಲ್ಲಾ ಸಂಘಟನೆಯವರಿಂದ ನನಗೆ ತುಂಬಾನೇ ಬೆಂಬಲ ಸಿಗುತ್ತಿದೆ ಎಂದು ತಿಳಿಸಿದ್ದಾರೆ.
24 ದಿನದಿಂದ ನಾನು ಜೀವ ಭಯದಲ್ಲಿ ಬೆದರಿಕೆಗಳಿಂದ ಭಯ ಭಯದಲ್ಲಿ ಬದುಕ್ತಾ ಇದ್ದೇನೆ. ಆದರೆ ಇಂದು ಎಲ್ಲೋ ಕಡೆಯಿಂದ ಒಂದು ಧೈರ್ಯ ಬಂದಿದೆ. ಆ ಧೈರ್ಯ ಬಂದಿರೋದಕ್ಕೆ ಹಾಗೂ ನನ್ನನ್ನು ಎಲ್ಲರೂ ಬೆಂಬಲಿಸುತ್ತಾ ಇದ್ದೀರಾ ಅನ್ನೋ ಕಾರಣಕ್ಕೆ ಇಂದು ನಾನು ನನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ ಎಂದು ಸಿಡಿ ಲೇಡಿ ಹೇಳಿದ್ದಾರೆ.