– ಕೊರೊನಾ ಜಾಗೃತಿಗಾಗಿ ಈ ಡಿಶ್
ಜೈಪುರ: ಚೀನಿ ವೈರಸ್ ಭಾರತಕ್ಕೆ ಕಾಲಿಟ್ಟ ಬಳಿಕ ಎಲ್ಲೆಲ್ಲೂ ಕೊರೊನಾದ್ದೆ ಮಾತು. ಘಟಾನುಘಟಿ ನಾಯಕರಿಂದ ಹಿಡಿದು ಸಾಮಾನ್ಯ ಜನರನ್ನೂ ಬಿಡದೆ ಕೋವಿಡ್ 19 ವಕ್ಕರಿಸುತ್ತಿದೆ. ಈ ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಹಲವಾರು ಜಾಗೃತಿಗಳನ್ನು ಜನ ಮೂಡಿಸುತ್ತಿದ್ದಾರೆ. ಅಂತೆಯೇ ಜೋಧ್ಪುರದ ರೆಸ್ಟೋರೆಂಟ್ನಲ್ಲಿ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.
Overcome the fear of corona with world's first ever invented in corona Pandemic… #covidcurry served with #masknaan. We are super proud of being world's first inventor of these unique concept… the motto behind this dish is to bring awareness about #corona pic.twitter.com/1Bpd0IJowS
— Vedic (@Vedic_restro) July 29, 2020
Advertisement
ಹೌದು. ರೆಸ್ಟೋರೆಂಟ್ನ ಮೆನುವಿನಲ್ಲಿ ಕೊರೊನಾ ವಿಷಯದಲ್ಲಿ ಡಿಶ್ ರೆಡಿಮಾಡಿದ್ದಾರೆ. ವೆದಿಕ್, ವೆಜ್ ರೆಸ್ಟೋರೆಂಟ್ ಆಗಿದ್ದು, ಇಲ್ಲಿ ಸಾಂಪ್ರದಾಯಿಕ ರಾಜಸ್ಥಾನಿ ಹಾಗೂ ಉತ್ತರ ಭಾರತ ಶೈಲಿಯ ಡಿಶ್ ತಯಾರಾಗುತ್ತವೆ. ಆದರೆ ಅದರ ಜೊತೆಗೆ ಕೋವಿಡ್ ಕರಿ ಹಾಗೂ ಮಾಸ್ಕ್ ನಾನ್ ತಯಾರು ಮಾಡಿ ಉಣಬಡಿಸಲಾಗುತ್ತಿದೆ.
Advertisement
Covid curry and Mask naan#covidcurry #masknaan pic.twitter.com/nuzAzmI5Ts
— Vedic (@Vedic_restro) July 31, 2020
Advertisement
ಈ ಸಂಬಂಧ ಎರಡು ಫೋಟೋಗಳನ್ನು ವೇದಿಕ್ ರೆಸ್ಟೋರೆಂಟ್ನ ಟ್ವಿಟ್ಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಲಾಗಿದೆ. ಮಾಸ್ಕ್ ರೀತಿಯಲ್ಲಿ ನಾನ್ ತಯಾರಿಸಿದ್ದು, ಮಾರಕ ಕಾಯಿಲೆ ಕೋವಿಡ್ ನಂತೆ ಗ್ರೇವಿ ಮಾಡಲಾಗಿದೆ. ಅಲ್ಲದೆ ಈ ಪೋಸ್ಟ್ ನಲ್ಲಿ ಎರಡು ಪತ್ರೇಕ ಡಿಶ್ಗಳನ್ನು ಪರಿಚಯಿಸು ಮೂಲ ಉದ್ದೇಶ ಏನೆಂದು ವೇದಿಕ್ ರೆಸ್ಟೋರೆಂಟ್ ಅವರು ತಿಳಿಸಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸದ್ಯ ಈ ಎರಡು ಖಾದ್ಯಗಳನ್ನು ತಯಾರಿಸಲಾಗುತ್ತಿದೆ ಎಂದು ಟ್ವೀಟ್ನಲ್ಲಿ ಬರೆದುಕೊಳ್ಳಲಾಗಿದೆ.
Advertisement
https://twitter.com/swordof5aban/status/1289116345531957249
ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲಿ ಒಬ್ಬರು, ಇಂತಹ ಡಿಶ್ಗಳು ಭಾರತದಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಫೋಟೋ ಶೇರ್ ಮಾಡಿಕೊಂಡು ಬರೆದುಕೊಂಡಿದ್ದಾರೆ.
https://twitter.com/GautamTrivedi_/status/1289181532456759296