– ಸೇವೆಯಿಂದ ವಜಾಗೊಂಡಿದ್ದ ಪೇದೆಯೂ ಅರೆಸ್ಟ್
ಮಂಡ್ಯ: ಹಳೇ ಟಿವಿಯ ರೆಡ್ ಮರ್ಕ್ಯೂರಿ ಟ್ಯೂಬ್ ಹೆಸರಿನಲ್ಲಿ 22 ಲಕ್ಷ ವಂಚಿಸಿದ್ದ ಗ್ಯಾಂಗ್ವೊಂದನ್ನು ಮಂಡ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯದ ಮಳವಳ್ಳಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಸೇವೆಯಿಂದ ವಜಾಗೊಂಡಿದ್ದ ಪೊಲೀಸ್ ಪೇದೆ ಸೇರಿ 8 ಮಂದಿ ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಕಾರ್, 2 ಬೈಕ್, 10.36 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
Advertisement
ಕಳೆದ ಜೂನ್ 22ರಂದು ಬೆಂಗಳೂರಿನಲ್ಲಿ ಎಂಜಿನಿಯರ್ ಕೆಲಸ ಮಾಡುತ್ತಿದ್ದ ನೀತನ್ ರಾಜ್ಗೆ ಕರೆ ಮಾಡಿದ ಗ್ಯಾಂಗ್, ರೆಡ್ ಮರ್ಕ್ಯೂರಿ ಟ್ಯೂಬ್ ಕೊಡುವುದಾಗಿ ಹೇಳಿ ಮಂಡ್ಯದ ಮಳವಳ್ಳಿಗೆ ಕರೆಸಿಕೊಂಡಿದ್ದಾರೆ. ನಂತರ ಮಾತುಕತೆ ವೇಳೆ ಇಬ್ಬರು ಪೊಲೀಸರ ಸೋಗಿನಲ್ಲಿ ಬಂದು ನೀತನ್ ರಾಜ್ನನ್ನು ಹೆದರಿಸಿದ್ದಾರೆ. ನಂತರ ಆತ ತಂದಿದ್ದ 22 ಲಕ್ಷ ಹಣವನ್ನು ಅವನಿಂದ ಕಿತ್ತುಕೊಂಡು ಅಲ್ಲಿಂದ ಕಳುಹಿಸಿದ್ದಾರೆ.
Advertisement
ಘಟನೆಯಾದ 20 ದಿನದ ನಂತರ ನೀತನ್ ರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆ ಕಾರ್ಯಾಚರಣೆಗೆ ಇಳಿದ ಡಿವೈಎಸ್ಪಿ ಪೃಥ್ವಿ, ಸಿಪಿಐ ಧನಂಜಯ ನೇತೃತ್ವದ ತಂಡ ಸವಾಲಿನ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಳೆ ಬ್ಲಾಕ್ ಆ್ಯಂಡ್ ವೈಟ್ ಟಿವಿ, ಹಳೇ ರೇಡಿಯೋ ಕೊಟ್ಟರೆ ಲಕ್ಷ ಲಕ್ಷ ಹಣ ಕೊಡುವುದಾಗಿ ಪೋಸ್ಟ್ ಗಳು ಹರಿದಾಡುತ್ತಿವೆ. ಟಿವಿ, ರೆಡಿಯೋಗೆ ಹಿಂದೆ ಬಳಸುತ್ತಿದ್ದ ರೆಡ್ ಮರ್ಕ್ಯೂರಿ ಟ್ಯೂಬ್ ಕೋಟಿ ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಂದ ಪೋಸ್ಟ್ ನಂಬಿ ಎಂಜಿನಿಯರ್ ವಂಚನೆಗೊಳಗಾಗಿದ್ದಾರೆ.