ಬೆಂಗಳೂರು: ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್, ಕ್ರಿಕೆಟ್ ಬ್ಯಾಗ್ ತೆರೆದು ಹೆಲ್ಮೆಟನ್ನು ಪ್ರೀತಿಯಿಂದ ನೋಡುತ್ತಿರುವ ಫೋಟೋವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
ಚೀನಿ ವೈರಸ್ ಕಾರಣದಿಂದ ಭಾರತದ ಕ್ರಿಕೆಟಿಗರು ಕ್ರೀಡಾಂಗಣದಿಂದ ದೂರ ಉಳಿದಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಸದ್ಯಕ್ಕೆ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ. ಪರಿಣಾಮ ಸುಮಾರು 4 ತಿಂಗಳಿನಿಂದ ಮನೆಯಲ್ಲೇ ಉಳಿದಿರುವ ಆಟಗಾರರು ಕ್ರಿಕೆಟನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಕೆಎಲ್ ರಾಹುಲ್, ಐ ಮಿಸ್ ಯು ಎಂಬ ಕ್ಯಾಷನ್ ನೀಡಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿನ ಪ್ರಭಾವ ಹೆಚ್ಚಾಗಿದ್ದು, ಪರಿಣಾಮ ಕೆಎಲ್ ರಾಹುಲ್ ತರಬೇತಿಯಿಂದಲೂ ದೂರ ಉಳಿದಿದ್ದಾರೆ.
ಉಳಿದಂತೆ ಟೀಂ ಇಂಡಿಯಾದ ಕೆಲ ಆಟಗಾರರು ತರಬೇತಿಯನ್ನು ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಘಜಿಯಾಬಾದ್ನಲ್ಲಿ ಸುರೇಶ್ ರೈನಾ, ರಿಷಬ್ ಪಂತ್ ತರಬೇತಿ ಆರಂಭಿಸಿದ್ದಾರೆ. ಕಳೆದ ವಾರ ಉಮೇಶ್ ಯಾದವ್, ಇಶಾಂತ್ ಶರ್ಮಾ, ಶಮಿ ಸೇರಿದಂತೆ ಹಲವರು ಬೌಲಿಂಗ್ ತರಬೇತಿ ಆರಂಭಿಸಿದ್ದರು. ಇತ್ತ ಮುಂಬೈನಲ್ಲಿ ರೋಹಿತ್ ಶರ್ಮಾ ಒಂದು ದಿನ ತರಬೇತಿ ನಡೆಸಿದ್ದರು.