ಬೆಂಗಳೂರು: “ಹೊಸ ಕಥೆ,, ಖಡಕ್ ಡೈಲಾಗ್..ಇಡೋ ಶಾರ್ಟ್..ಹೊಡೆಯೋ ಮ್ಯೂಸಿಕ್ ಎಲ್ಲವೂ ಸರಿ ಇದ್ರೆ ಎಲ್ಲರೂ ಹೀರೋಗಳೇ’’ ಇದು ಕೊಡೆ ಮುರುಗ ಟ್ರೈಲರ್ ನ ನಿರೂಪಣೆಯ ಝಲಕ್.. ಹೀರೋ ಆಗಬೇಕು ಅಂದ್ರೆ ಸ್ಮಾರ್ಟ್ ಆಗಿರಬೇಕು, ಸ್ಟೈಲೀಶ್ ಆಗಿರಬೇಕು ಎಲ್ಲದಕ್ಕಿಂತ ಮುಖ್ಯವಾಗಿ ನೋಡೋದಿಕ್ಕೆ ಚೆನ್ನಾಗಿರಬೇಕು. ಹೀಗೆ ಇದ್ದವರು ಮಾತ್ರ ಹೀರೋನಾ…? ಕೂದಲಿಲ್ಲದ, ಉದ್ದ ಮೀಸೆಯ ಕಪ್ಪುಗಿರುವ ವ್ಯಕ್ತಿ ಹೀರೋ ಆಗಬಹುದು ಅನ್ನೋದನ್ನೋ ತೋರಿಸಿಕೊಡೋದಿಕ್ಕೆ ಹೊರಟಿರುವ ಸಿನಿಮಾವೇ ಕೊಡೆ ಮುರುಗ..
ಗಾಂಧಿನಗರದ ರೆಗ್ಯುಲರ್ ಕಾನ್ಸೆಪ್ಟ್ ಬಿಟ್ಟು ವಿಭಿನ್ನವಾಗಿ ಮಾಡಿರುವ ಸಿನಿಮಾ ಕೊಡೆ ಮುರುಗ. ಟೈಟಲ್ , ಪೋಸ್ಟರ್ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾದ ಟ್ರೈಲರ್ ಸಖತ್ ಮಜಾವಾಗಿ ಮೂಡಿ ಬಂದಿದೆ. ಪ್ರೇಕ್ಷಕರನ್ನು ಬಿದ್ದು ಬಿದ್ದು ನಗಿಸುವ ಕಾಮಿಡಿ, ಆಗಾಗೇ ಬರುವ ಪಂಚಿಂಗ್ ಡೈಲಾಗ್.. ವಿಷ್ಯುವಲ್ ಕ್ವಾಲಿಟಿ, ಮ್ಯೂಸಿಕ್ ಎಲ್ಲವೂ ಸಿಂಪಲಿ ಸೂಪರ್ ಆಗಿ ಮೂಡಿ ಬಂದಿದೆ.
Advertisement
Advertisement
ಒಂದಷ್ಟು ಸೀರಿಯಲ್ ಗಳಲ್ಲಿ ಕೆಲಸ ಮಾಡಿರುವ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಕೊಡೆ ಮುರುಗ ಸಿನಿಮಾದ ಮೂಲಕ ಗೆಲುವಿನ ನಗೆ ಬೀರುವ ಮುನ್ಸೂಚನೆ ನೀಡಿದ್ದಾರೆ. ಗಾಂಧಿನಗರದಲ್ಲಿ ನಡೆಯುವ ಕೆಲ ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಮನರಂಜನೆಯ ಅಂಶವಾಗಿ ಪರಿವರ್ತಿಸುವ ಕಲೆಯನ್ನು ಅದ್ಭುತವಾಗಿ ನಿರೂಪಿಸಿದ್ದಾರೆ ಸುಬ್ರಹ್ಮಣ್ಯ. ಕೇವಲ ನಿರ್ದೇಶನ ಮಾತ್ರವಲ್ಲ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದಾರೆ.
Advertisement
ಇನ್ನು, ಅಗ್ನಿಸಾಕ್ಷಿ ಧಾರವಾಹಿಯಲ್ಲಿ ವಿಲನ್ ಆಗಿ ಗುರುತಿಸಿಕೊಂಡಿದ್ದ ಮುರುಗ ಉರೂಫ್ ಮುನಿಕೃಷ್ಣ , ಪಲ್ಲವಿ ಗೌಡ , ಕುರಿ ಪ್ರತಾಪ್, ಸ್ವಾತಿ ಗುರುದತ್, ತುಮಕೂರು ಮೋಹನ್ ಸೇರಿದಂತೆ ಅನೇಕ ಕಿರುತೆರೆ ಕಲಾವಿದರು ಈ ಸಿನಿಮಾದಲ್ಲಿ ನಟಿಸಿರುವ ಇವರೆಲ್ಲಾ ಪಕ್ಕ ನೂರಷ್ಟು ಮನರಂಜನೆ ನೀಡಲಿದ್ದಾರೆ.
Advertisement
ಕೊಡೆಮುರುಗ ಚಿತ್ರ ಕೆ.ಆರ್.ಕೆ ಬ್ಯಾನರ್ ನಡಿ ನಿರ್ಮಾಣವಾಗಿದೆ. ಮಮ್ಮಿ ಚಿತ್ರ ಖ್ಯಾತಿಯ ನಿರ್ಮಾಪಕ ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಬಂಡವಾಳ ಹೂಡಿದ್ದಾರೆ. ಮನರಂಜನೆ ಮಾತ್ರವಲ್ಲದೇ ಸಿನಿಪ್ರೇಕ್ಷಕರಿಗೆ ಒಂದು ಮೆಸೇಜ್ ಕೊಡಲು ರೆಡಿಯಾಗಿರುವ ಕೊಡೆ ಮುರುಗ ಸಿನಿಮಾ ಏಪ್ರಿಲ್ 9ಕ್ಕೆ ಬೆಳ್ಳಿತೆರೆಮೇಲೆ ಎಂಟ್ರಿ ಕೊಡ್ತಿದೆ. ಸೋ ಮಿಸ್ ಮಾಡದೆ ಸಿನಿಮಾ ನೋಡಿ ಎಂಜಾಯ್ ಮಾಡಿ. ಹೊಸಬರಿಗೆ ಪ್ರೋತ್ಸಾಹ ಕೊಡಿ.