ನವದೆಹಲಿ: ಗ್ರಾಹಕರೊಬ್ಬರು ರಿಮೋಟ್ ಕಾರ್ ಆರ್ಡರ್ ಮಾಡಿದ್ದರು. ಆದರೆ ಆನ್ಲೈನ್ನಲ್ಲಿ ಬಂದಿರುವ ವಸ್ತುವನ್ನು ನೋಡಿ ಈಗ ಚಹ ಮಾಡೋದೇ ಬೆಸ್ಟ್ ಎಂದು ಹೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Advertisement
ದೆಹಲಿಯ ಭಗವಾನ್ ನಗರ ಆಶ್ರಮ ಏರಿಯಾದಲ್ಲಿ ಗ್ರಾಹಕರೊಬ್ಬರು ಇ-ಕಾಮರ್ಸ್ ತಾಣದಲ್ಲಿ ರಿಮೋಟ್ ಕಂಟ್ರೋಲ್ ಕಾರ್ ಆರ್ಡರ್ ಮಾಡಿದ್ದರು. ಇವರಿಗೆ ಬಂದಿದ್ದು ಮಾತ್ರ ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್ ಆಗಿದೆ. ಇದನ್ನೂ ಓದಿ: ಶಾಪಿಂಗ್ ತಾಣಗಳಲ್ಲಿ ಫ್ಲ್ಯಾಶ್ ಸೇಲ್ ನಿಷೇಧ?
Advertisement
Advertisement
ವಿಕ್ರಮ್ ಬುರಗೋಹೈನ್ ಎಂಬುವರಿಗೆ ಆನ್ಲೈನ್ ಶಾಪಿಂಗ್ನಿಂದ ಕೆಟ್ಟ ಅನುಭವಾಗಿದೆ. ಫೇಸ್ಬುಕ್ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಮಕ್ಕಳಿಗಾಗಿ ನಾನು ರಿಮೋಟ್ ಕಂಟ್ರೋಲ್ ಕಾರು ಆರ್ಡರ್ ಮಾಡಿದ್ದೇನು. ಆದರೆ ಈ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೇಟ್ ಬಂತು. ಈಗ ಚಹಾ ಮಾಡಲು ಹೋಗೋದೇ ಎಂದು ವಿಕ್ರಮ್ ಪೋಸ್ಟ್ ಹಾಕಿದ್ದಾರೆ.
Advertisement
ನೀವು ರಿಮೋಟ್ ಕಾರು ಆರ್ಡರ್ ಮಾಡಿದ್ದು ನೋಡಿ ಮಕ್ಕಳಿರುವುದು ಅವರಿಗೆ ಗೊತ್ತಾಯಿತು. ಹಾಗಾಗಿ ಪಾರ್ಲೆ-ಜಿ ಕಳಿಸಿದ್ದಾರೆ ಎಂದು ಫನ್ನಿ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಈಗಾಗಲೇ ದೂರು ನೀಡಿದ್ದೇನೆ. ಅದರಂತೆ ಕಂಪನಿ ಹಣ ಹಿಂತಿರುಗಿಸುವ ಪ್ರಕ್ರಿಯೆ ನಡೆಸುತ್ತಿದೆ. ಕ್ಷಮೆಯನ್ನೂ ಕೇಳಿದ್ದಾರೆ ಎಂದು ವಿಕ್ರಮ್ ಹೇಳಿದ್ದಾರೆ.