ನವದೆಹಲಿ: ಇಬ್ಬರು ಶಂಕಿತ ಜೈಷ್-ಎ-ಮೊಹಮ್ಮದ್ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ರಾತ್ರಿ ನಡೆಯಬೇಕಿದ್ದ ಬೃಹತ್ ದಾಳಿಯನ್ನು ವಿಫಲಗೊಳಿಸಿದ್ದಾರೆ. ದೆಹಲಿ ವಿಶೇಷ ಪೊಲೀಸ್ ಪಡೆ ಇಬ್ಬರು ಉಗ್ರರನ್ನು ಬಂಧಿಸಿದೆ.
Two suspected terrorists – residents of Jammu and Kashmir – were arrested last night by Delhi Police Special Cell. Two semi-automatic pistols along with 10 live cartridges recovered. https://t.co/KUPlC3POWP pic.twitter.com/Wxp3cKpFef
— ANI (@ANI) November 17, 2020
Advertisement
ದೆಹಲಿಯ ಸಾರೈ ಕೇಲ್ ಖಾನ್ ಬಳಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
Advertisement
ಈ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ಸಾರೈ ಕೇಲ್ ಖಾನ್ನ ಮಿಲೇನಿಯಂ ಪಾರ್ಕ್ ಬಳಿ ಸೋಮವಾರ ರಾತ್ರಿ 10.15ರ ಸುಮಾರಿಗೆ ಬಂಧಿಸಲಾಗಿದೆ. ಇಬ್ಬರು ಉಗ್ರರು ಜಮ್ಮು ಕಾಶ್ಮೀರದ ಮೂಲದವರಾಗಿದ್ದು, ಬಂಧಿತರಿಂದ 2 ಸೆಮಿ-ಆಟೋಮೆಟಿಕ್ ಪಿಸ್ತೂಲು ಹಾಗೂ 10 ಜೀವಂತ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Advertisement
Two suspected militants, who are residents of Jammu and Kashmir, were arrested last night. Two semi-automatic pistols along with 10 live cartridges recovered from their possession: Delhi Police Special Cell
— ANI (@ANI) November 17, 2020
Advertisement
ಇಬ್ಬರು ಶಂಕಿತ ಜೈಷ್-ಎ-ಮೊಹಮ್ಮದ್ ಉಗ್ರರು ಜಮ್ಮು ಖಾಶ್ಮೀರದ ನಿವಾಸಿಗಳಾಗಿದ್ದು, ಬರಾಮುಲ್ಲಾದ ಪಾಲ ಮೊಹಲ್ಲಾ ನಿವಾಸಿ ಸನಾವುಲ್ಲಾ ಮಿರ್ ಪುತ್ರ 22 ವರ್ಷದ ಅಬ್ದುಲ್ ಲತಿಫ್, ಕುಪ್ವಾರಾದ ಹಾತ್ಮುಲ್ಲಾ ಗ್ರಾಮದ ಬಷೀರ್ ಅಹ್ಮದ್ ಪುತ್ರ ಅಶ್ರಫ್ ಖತನಾ(20) ಎಂದು ಗುರುತಿಸಲಾಗಿದೆ. ಇಬ್ಬರು ಉಗ್ರರು ಈ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತೆರಳಲು ಯತ್ನಿಸಿದ್ದರು. ಇದನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಹೀಗಾಗಿ ದೆಹಲಿಯಲ್ಲಿ ದಾಳಿ ನಡೆಸಿದ ಬಳಿಕ ನೇಪಾಳ ಮಾರ್ಗವಾಗಿ ಪಿಒಕೆಗೆ ತೆರಳಲು ಸಂಚು ರೂಪಿಸಿದ್ದರು.
ಈ ನಡುವೆ ಆಗಸ್ಟ್ನಲ್ಲಿ ದೆಹಲಿ ಪೊಲೀಸರು ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಬಂಧಿಸುವ ಮೂಲಕ ಇಂತಹದ್ದೇ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದರು. ಈ ವೇಳೆ ಧೌಲಾ ಕುವಾನ್ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದರು. ಬಂಧನದ ಬಳಿಕ 15 ಕೆ.ಜಿ. ಐಇಡಿಯನ್ನು ವಶಪಡಿಸಿಕೊಂಡಿದ್ದರು.