ರಾಯಚೂರು: ನಗರಸಭೆಯ ಹಿರಿಯ ಸದಸ್ಯ ತಿಂಗಳ ಮಾಮೂಲಿಗೆ ಡಿಮ್ಯಾಂಡ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಅಂತ ರಾಯಚೂರು ನಗರಸಭೆ ಅಧ್ಯಕ್ಷ ಇ.ವಿನಯಕುಮಾರ್ ಆರೋಪಿಸಿದ್ದಾರೆ. ಆದ್ರೆ ಹಿರಿಯ ಸದಸ್ಯ ಜಿಂದಪ್ಪ ಅಧ್ಯಕ್ಷನಿಂದ ಜೀವಬೆದರಿಕೆಯಿದೆ ಅಂತ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸದಸ್ಯರ ನಡುವೆಯೆ ಜಗಳ ನಡೆದಿದ್ದು, ಕೆಲವರು ಅಧ್ಯಕ್ಷರ ಚೇಂಬರ್ ಗೆ ನುಗ್ಗಿ ದಾಂಧಲೆ ಮಾಡಿ ಬಾಗಿಲು ಮುರಿಯಲು ಯತ್ನಿಸಿದ ಘಟನೆ ನಡೆದಿದೆ.
Advertisement
ರಾಯಚೂರು ನಗರಸಭೆಯಲ್ಲಿ ಅಧ್ಯಕ್ಷ ,ಹಿರಿಯ ಸದಸ್ಯನ ನಡುವೆ ಜೋರು ಜಗಳ ನಡೆದಿದ್ದು, ಸದಸ್ಯ ಜಿಂದಪ್ಪ ತಿಂಗಳು ಹಣ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಹಣ ನೀಡಲು ನಿರಾಕರಿಸಿದ್ದರಿಂದ ನಿರಂತರ ಹಿಂಸೆ ನೀಡುತ್ತಿದ್ದಾರೆ. ಹಣಕ್ಕಾಗಿ ಜಿಂದಪ್ಪ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಅಂತ ವಿನಯಕುಮಾರ್ ಆರೋಪಿಸಿದ್ದಾರೆ. ನಗರಸಭೆ ಕಚೇರಿಯಲ್ಲಿ ಈ ವಿಚಾರವಾಗಿ ಪ್ರಶ್ನಿಸಲು ತೆರಳಿದ್ದ ನಗರಸಭೆ ಉಪಾಧ್ಯಕ್ಷೆ ಪತಿ ನರಸಿಂಹ ಮಾಡಗೇರಿ ಭಾರಿ ವಾಗ್ವಾದ ನಡೆಸಿದ್ದಾರೆ. ಅಧ್ಯಕ್ಷರ ಚೇಂಬರ್ಗೆ ನುಗ್ಗಿ ದಾಂಧಲೆ ಮಾಡಿ ಬಾಗಿಲು ಧ್ವಂಸಕ್ಕೆ ಯತ್ನವೂ ನಡೆದಿದೆ. ಸ್ಥಳಕ್ಕೆ ಸದರ ಬಜಾರ್ ಠಾಣೆ ಪೊಲೀಸರು ಆಗಮಿಸಿ ಪರಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
Advertisement
Advertisement
ಕಾಂಗ್ರೆಸ್ ಸದಸ್ಯರಿಂದಲೇ ನಗರಸಭೆ ಅಧ್ಯಕ್ಷ ಸ್ಥಾನ ಕಿತ್ತುಕೊಳ್ಳುವ ಯತ್ನ ನಡೆದಿದೆ. ಈ ಬಗ್ಗೆ ಪಕ್ಷದ ಹಿರಿಯರ ಗಮನಕ್ಕೆ ತರಲಾಗಿದೆ. ಚೇಂಬರ್ ಗೆ ನುಗ್ಗಿ ದಾಂಧಲೆ ಮಾಡಿದ್ದರಿಂದ ಎಸ್ಪಿಗೆ ದೂರು ನೀಡುವುದಾಗಿ ವಿನಯಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಜಗಳ ಬೀದಿಗೆ ಬಂದಿದ್ದು ನಡು ರಸ್ತೆಯಲ್ಲೂ ಜಗಳವಾಡಿದ್ದಾರೆ. ಇದನ್ನೂ ಓದಿ: ಕೊರೋನಾ 3ನೇ ಅಲೆ ಆತಂಕ- ರಾಯಚೂರಿನಾದ್ಯಂತ 7 ಮಕ್ಕಳ ಕೋವಿಡ್ ಕೇರ್ಸೆಂಟರ್ ತೆರೆಯಲು ಮುಂದಾದ ಜಿಲ್ಲಾಡಳಿತ
Advertisement
ಇನ್ನೂ ಸದಸ್ಯ ಜಿಂದಪ್ಪ ನಗರಸಭೆ ಅಧ್ಯಕ್ಷ ವಿನಯಕುಮಾರ್ ಮಾನಸಿಕ ಅಸ್ವಸ್ಥನಿದ್ದಾನೆ, ನನಗೆ ಜೀವ ಬೆದರಿಕೆ ಹಾಕಿದ್ದಾನೆ. ವಿನಯಕುಮಾರ್ ನಿಂದ ರಕ್ಷಣೆ ಬೇಕು ಅಂತ ಅಧ್ಯಕ್ಷನ ವಿರುದ್ಧ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ರಾಯಚೂರು ಜಿಲ್ಲೆಯಾದ್ಯಂತ ಭಾರೀ ಮಳೆ – ಮನೆಗಳಿಗೆ ನೀರು ನುಗ್ಗಿ ಅವಾಂತರ