ರಾಯಚೂರು: ಮಹಾಶಿವರಾತ್ರಿ ಹಿನ್ನೆಲೆ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ರುದ್ರ ದೇವರಿಗೆ ರುದ್ರಾಭಿಷೇಕ ನೆರವೇರಿಸಿದರು. ಮಠದಲ್ಲಿನ ಶಿವಲಿಂಗಕ್ಕೆ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಇನ್ನೂ ರಾಯಚೂರಿನಲ್ಲಿ ಮಹಾಶಿವರಾತ್ರಿಯನ್ನ ಜನ ಸಡಗರ ಹಾಗೂ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಬೆಳಗಿನ ಜಾವದಿಂದಲೇ ಶಿವದರ್ಶನಕ್ಕೆ ಭಕ್ತರು ದೇವಾಲಯಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
Advertisement
ಶಿವನ ಪೂಜೆ ಮಾಡೋದು ಹೇಗೆ? ವ್ರತದ ಮಹತ್ವ ಏನು?https://t.co/2AVyahFbuB#Shivratri #Mahashivratri #KannadaNews
— PublicTV (@publictvnews) March 11, 2021
Advertisement
ನಗರದ ಚಂದ್ರಮೌಳೇಶ್ವರ ದೇವಾಲಯ, ನಂದೀಶ್ವರ ದೇವಾಲಯ, ನಗರೇಶ್ವರ ದೇವಾಲಯ, ರಾಮಲಿಂಗೇಶ್ವರ ದೇವಾಲಯ ಸೇರಿದಂತೆ ನಗರದ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.ಮಹಾರುದ್ರಾಭೀಷೆಕ, ಹೋಮ ಹವನಗಳು ನಿರಂತರವಾಗಿ ನಡೆದಿದ್ದು.ರಾತ್ರಿ ಜಾಗರಣೆಗೆ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Advertisement
ಶಿವರಾತ್ರಿಯಂದು ಲಿಂಗಸ್ಪರ್ಶ ಮಾಡೋದು ಹೇಗೆ?https://t.co/mPDK4PY3u2#Shivalinga #Mahashivaratri2021 #ShivaRatri #KannadaNews
— PublicTV (@publictvnews) March 11, 2021