ಲಕ್ನೋ: ವೈರಸ್ ಹರಡದಂತೆ ಜನರ ರಕ್ಷಣೆಗೆ ಸರ್ಕಾರ ಲಾಕ್ಡೌನ್ ನಂತಹ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಸೋಂಕಿನಿಂದ ಕಾಪಾಡುವಂತೆ ಜನರು ದೇವರ ಮೊರೆ ಹೋಗುತ್ತಿರುವವರ ನಡುವೆಯೇ ಉತ್ತರ ಪ್ರದೇಶದ ಜನರು ಸೋಂಕಿಗೆ ದೇವರ ಸ್ಥಾನ ನೀಡಿ ದೇವಸ್ಥಾನ ನಿರ್ಮಾಣ ಮಾಡಿರುವ ಅಪರೂಪದ ಘಟನೆ ನಡೆದಿದೆ. ಇದನ್ನೂ ಓದಿ: ಕುದುರೆ ಜೊತೆ ಧೋನಿ ರೇಸ್
ಪ್ರಯಾಗ್ ರಾಜ್ನ ಶುಕ್ಲುಪುರ್ ಗ್ರಾಮದಲ್ಲಿ ಕೊರೊನಾ ದೇವಿಯ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಕೊರೊನಾಗೆ ದೇವರ ಸ್ವರೂಪ ನೀಡಿದ ಇಲ್ಲಿನ ಜನರು ಕೊರೊನಾ ಮಾತೆಯನ್ನು ಪ್ರತಿಷ್ಟಾಪಿಸಿ, ಗ್ರಾಮಸ್ಥರು ಪೂಜೆ ಮಾಡುತ್ತಿದ್ದರು. ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಜಿಲ್ಲಾಡಳಿತ ದೇವಾಲಯವನ್ನು ನೆಲಸಮ ಮಾಡಿದೆ. ಇದನ್ನೂ ಓದಿ: ನೀವು ಮನೆಯಲ್ಲೇ ಮಾಡಿ ಚಿಕನ್ ಕುರ್ಮ
Advertisement
Advertisement
ಕೊರೊನಾ ಭಯದಿಂದಾಗಿ ಜನರು ಮೂಢನಂಬಿಕೆಗೆ ಒಳಗಾಗಿ ಈ ದೇವಾಲಯ ನಿರ್ಮಾಣ ಮಾಡಿದರು. ಇದರ ಹಿಂದೆ ವ್ಯಕ್ತಿಯೊಬ್ಬನ ಸ್ವಹಿತಾಸಕ್ತಿ ಕೂಡ ಇದೆ. ಗ್ರಾಮದ ಜನರಿಗೆ ಕೊರೊನಾ ಭಯ ಮೂಡಿಸಿ. ತನ್ನ ವಿರೋಧಿಯ ಭೂಮಿ ಒತ್ತುವರಿ ನಡೆಸಿದ್ದಾನೆ. ಈ ವಿವಾದ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಭೂಮಿ ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿನ ದೇವಾಲಯವನ್ನು ಕೆಡವಿದ್ದಾರೆ.
Advertisement
Advertisement
ಗ್ರಾಮದಲ್ಲಿನ ಸೋಂಕು ನಿವಾರಣೆಯಾಗುವಂತೆ ರಾತ್ರೋರಾತ್ರಿ ಇಲ್ಲಿನ ಗ್ರಾಮಸ್ಥರು ದೇವರ ಗುಡಿ ಕಟ್ಟಿದ್ದರು. ಈ ದೇವಾಲಯವನ್ನು ಬೆಳಗಾಗುವುದರೊಳಗೆ ಧ್ವಂಸ ಮಾಡಲಾಗಿದೆ, ಪೊಲೀಸರು ಉದ್ದೇಶ ಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಎರಡು ಕುಟುಂಬದ ನಡುವೆ ಭೂಮಿ ವಿವಾದವಿದ್ದು, ಇದೇ ಕಾರಣಕ್ಕೆ ಇಲ್ಲಿ ದೇವಾಲಯ ನಿರ್ಮಿಸಲಾಗಿದೆ. ಈ ಬಗ್ಗೆ ಮತ್ತೊಂದು ಗುಂಪು ದೂರು ಕೂಡ ನೀಡಿದೆ ಎಂದಿದ್ದಾರೆ. ಕಳೆದ ಐದು ದಿನಗಳ ಹಿಂದೆ ಸ್ಥಳೀಯರ ಸಹಾಯದಿಂದ ಲೊಕೇಶ್ ಕುಮಾರ್ ಶ್ರೀವಾತ್ಸವ ಇಲ್ಲಿ ಮಂದಿರ ಕಟ್ಟಿಸಿದ್ದನು. ಕೊರೊನಾ ಮಾತೆಯ ಮೂರ್ತಿಯನ್ನು ಕೂರಿಸಿ , ರಾಧೆ ಶ್ಯಾಮ್ ವರ್ಮ್ ಎಂಬ ಪುರೋಹಿತನನ್ನು ನೇಮಕ ಮಾಡಲಾಗಿತ್ತು. ಇದಾದ ಬಳಿಕ ಜನರು ದೇವರ ಆರಾಧನೆಗೆ ಮುಂದಾದರು.
ನೋಯ್ಡ ಮೂಲಕ ನಾಗೇಶ್ ಕುಮಾರ್ ಶ್ರೀವಾತ್ಸವ್ ಮತ್ತು ಜೈ ಪ್ರಕಾಶ್ ಶ್ರೀವಾತ್ಸವ ಪಾಲುದಾರಿಕೆ ಭೂಮಿಯನ್ನು ಈ ಗ್ರಾಮದಲ್ಲಿ ಹೊಂದಿದ್ದರು. ಅವರು ನೋಯ್ಡಗೆ ಮರಳುತತ್ತಿದ್ದಂತೆ ಈ ದೇವಾಲಯ ನಿರ್ಮಾಣವಾಗಿದೆ. ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ನಾಗೇಶ್ ಪೊಲೀಸರಿಗೆ ದೂರು ನೀಡಿದ್ದರು. ವಿವಾದಿತ ಜಮೀನಿನಲ್ಲಿ ಏಕಾಏಕಿ ದೇವಾಲಯ ನಿರ್ಮಿಸಿದ ಕಾರಣ ಪೊಲೀಸರು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಈ ಹಿನ್ನಲೆ ಈಗ ವಿರೋಧಿ ಪಕ್ಷದ ಗುಂಪು ಪೊಲೀಸರ ವಿರುದ್ಧ ಹರಿಹಾಯ್ದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.