ಬೆಂಗಳೂರು: ಮಾಗಡಿ ರಸ್ತೆಯ ಟೋಲ್ಗೇಟ್ ಅಂಡರ್ಪಾಸ್ ಮೇಲಿದ್ದ ನಟ ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆಯನ್ನ ರಾತ್ರೋ ರಾತ್ರಿ ತೆಗೆಯಲಾಗಿದೆ. ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿರುವ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮುನ್ನೇಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
Advertisement
ಟೋಲ್ಗೇಟ್ ಸರ್ಕಲ್ ಗೆ ಶ್ರೀ ಬಾಲ ಗಂಗಾಧರ ಸ್ವಾಮೀಜಿ ವೃತ್ತ ಅಂತ ಹೆಸರಿಡಲಾಗಿದೆ. ಹಾಗಾಗಿ ವಿಷ್ಣುವರ್ಧನ್ ಪ್ರತಿಮೆ ಸ್ಥಳದಲ್ಲಿ ಬಾಲಗಂಗಾಧರ ಸ್ವಾಮೀಜಿ ಸ್ಟ್ಯಾಚು ಇಡಲು ನಿರ್ಧರಿಸಲಾಗಿದೆ. ಹೀಗಾಗಿ ರಾತ್ರಿ ವಿಷ್ಣು ಪ್ರತಿಮೆ ತೆರವುಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಪ್ರತಿಮೆ ತೆಗೆಯುವ ಮೂಲಕ ಕನ್ನಡಿಗರಿಗೆ ಅವಮಾನಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಟೋಲ್ ಗೇಟ್ ಅಂಡರ್ ಪಾಸ್ ಮೇಲೆ ವಿಷ್ಣು ದಾದಾ ಸ್ಟ್ಯಾಚು ಇಡಲಾಗಿತ್ತು. ಎರಡು ವರ್ಷದ ಹಿಂದೆ ವಿಷ್ಣು ಸ್ಟ್ಯಾಚು ಪ್ರತಿಷ್ಠಾನ ಮಾಡಲಾಗಿತ್ತು. ವಿಷ್ಣು ದಾದಾಗೆ ಪದೇ ಪದೇ ಅವಮಾನವಾಗ್ತಿದೆ. ರಾತ್ರೋ ರಾತ್ರಿ ಸ್ಟ್ಯಾಚು ಒಡೆದು ಹಾಕಲಾಗಿದೆ. ಕಳೆದ ಒಂದು ವಾರದಿಂದ ಇಲ್ಲಿ ಸ್ಟ್ಯಾಚು ತೆಗೆಸ್ತೀನಿ ಅನ್ನೋ ಗುಸು ಗುಸು ನಡೆಯುತ್ತಿತ್ತು. ಅತೃಪ್ತ ಆತ್ಮಗಳಿಗೆ ವಿಷ್ಣುದಾದರನ್ನ ಸಹಿಸಿಕೊಳ್ಳೋದಕ್ಕೆ ಆಗುತ್ತಿಲ್ಲ. ಕಳೆದ ಬಾರಿ ಸಹ ಇದೇ ರೀತಿ ಪ್ರತಿಮೆ ತೆಗೆದು ಅವಮಾನಿಸಲಾಗಿತ್ತು. ನಂತರ ಅಭಿಮಾನಿಗಳು ಮತ್ತೆ ಪ್ರತಿಮೆ ಪುನರ್ ಪ್ರತಿಷ್ಠಾಪಿಸಿದ್ದರು. ಸಾರಾ ಗೋವಿಂದ್, ಎನ್.ಆರ್.ರಮೇಶ್ ಗೆ ವಿಷ್ಣುವರ್ಧನ್ ಕಂಡ್ರೆ ಆಗಲ್ಲ. ವಿಷ್ಣು ಪ್ರತಿಮೆ ಇಟ್ರೆ ಅವರಿಗೆ ಕೆಲವರು ಕಿವಿ ಚುಚ್ಚೊ ಕೆಲಸ ಮಾಡ್ತಾರೆ. ಕಂಪ್ಲೇಂಟ್ ಕೊಡೋದಕ್ಕೆ ಅಭಿಮಾನಿ ಪದಾದಿಕಾರಿಗಳ ಜೊತೆ ಮಾತಾಡುತ್ತೇವೆ ಎಂದು ವಿಷ್ಣು ಅಭಿಮಾನಿ ರಮೇಶ್ ಗೌಡ ಹೇಳಿದ್ದಾರೆ.
Advertisement
ವಿಷ್ಣು ಪ್ರತಿಮೆ ತೆರವಿನ ಹಿಂದೆ ಸಾರಾ ಗೋವಿಂದು ಹಾಗೂ ಎನ್.ಆರ್.ರಮೇಶ್ ಹೆಸರು ಕೇಳಿ ಬರುತ್ತಿದೆ. ಕಳೆದ ವರ್ಷವೂ ಇದೇ ರೀತಿ ವಿಷ್ಣು ಸ್ಮಾರಕಕ್ಕೆ ಹಾನಿಯಾಗಿತ್ತು. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ವಿಷ್ಣು ಸರ್ ಇಂಡಸ್ಟ್ರಿಗೆ ಬಂದಾಗಿನಿಂದಲೂ ಈ ರೀತಿ ಅವರ ವಿರುದ್ಧ ಷಡ್ಯಂತ್ರ ನಡೀತಿದೆ ಎಂದು ರಮೇಶ್ ಗೌಡ ಹೇಳಿದ್ದಾರೆ.