-ಬಳ್ಳಾರಿ 661, ಮೈಸೂರಿನಲ್ಲಿ 665 ಪ್ರಕರಣ
ಬೆಂಗಳೂರು: ರಾಜ್ಯದಲ್ಲಿಂದು 9,894 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,59,445ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾಗೆ 104 ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾದಿಂದ ಗುಣಮುಖರಾಗಿ 8,402 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 807 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸದ್ಯ 99,203 ಸಕ್ರಿಯ ಪ್ರಕರಣಗಳಿದ್ದು, ಸಾವನ್ನಪ್ಪಿದವರ ಸಂಖ್ಯೆ 7,265ಕ್ಕೆ ಏರಿಕೆಯಾಗಿದೆ.
Advertisement
Advertisement
ರಾಜಧಾನಿ ಬೆಂಗಳೂರಿನಲ್ಲಿಂದು 3,479 ಪ್ರಕರಣಗಳು ವರದಿಯಾಗಿದ್ದು, 45 ಸೋಂಕಿತರನ್ನ ಕೊರೊನಾ ಬಲಿ ಪಡೆದುಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,70,662ಕ್ಕೆ ಏರಿಕೆಯಾಗಿದ್ದು, 41,093 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ಕೊರೊನಾದಿಂದ ಬೆಂಗಳೂರು ಮಹಾನಗರದಲ್ಲಿ 2,436 ಮಂದಿಗೆ ಸಾವನ್ನಪ್ಪಿದ್ದಾರೆ.
Advertisement
ಇಂದಿನ 13/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp https://t.co/whfEUCiKiA pic.twitter.com/pNQcw5M28a
— K'taka Health Dept (@DHFWKA) September 13, 2020
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 165, ಬಳ್ಳಾರಿ 661, ಬೆಳಗಾವಿ 318, ಬೆಂಗಳೂರು ಗ್ರಾಮಾಂತರ 216, ಬೆಂಗಳೂರು ನಗರ 3,479, ಬೀದರ್ 82, ಚಾಮರಾಜನಗರ 80, ಚಿಕ್ಕಬಳ್ಳಾಪುರ 85, ಚಿಕ್ಕಮಗಳೂರು 171, ಚಿತ್ರದುರ್ಗ 232, ದಕ್ಷಿಣ ಕನ್ನಡ 404, ದಾವಣಗೆರೆ 144, ಧಾರವಾಡ 199, ಗದಗ 198, ಹಾಸನ 426, ಹಾವೇರಿ 191, ಕಲಬುರಗಿ 214, ಕೊಡಗು 33, ಕೋಲಾರ 73, ಕೊಪ್ಪಳ 259, ಮಂಡ್ಯ 246, ಮೈಸೂರು 665, ರಾಯಚೂರು 190, ರಾಮನಗರ 38, ಶಿವಮೊಗ್ಗ 299, ತುಮಕೂರು 294, ಉಡುಪಿ 126, ಉತ್ತರ ಕನ್ನಡ 141, ವಿಜಯಪುರ 30 ಮತ್ತು ಯಾದಗಿರಿಯಲ್ಲಿ 235 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.