– 681 ಜನ ಐಸಿಯುನಲ್ಲಿ ಚಿಕಿತ್ಸೆ, ಇಂದು 114 ಜನ ಸಾವು
– ಬೆಂಗಳೂರಲ್ಲಿ 1,243 ಹೊಸ ಕೇಸ್
– ಶಿವಮೊಗ್ಗದಲ್ಲಿ ಇಂದು ಒಂದೂ ಪ್ರಕರಣವಿಲ್ಲ
ಬೆಂಗಳೂರು: ರಾಜ್ಯದಲ್ಲಿ ಇಂದು 4,267 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 5,218 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
ರಾಜ್ಯದಲ್ಲಿ ಇಂದು 4,267 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,82,354ಕ್ಕೆ ಹೆಚ್ಚಳವಾಗಿದೆ. ಇಂದು 5,218 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 79,908 ಸಕ್ರಿಯ ಪ್ರಕರಣಗಳಿವೆ. ಸಾವಿನಲ್ಲಿ ಸೆಂಚೂರಿ ಬಾರಿಸಿರುವ ಮಾಹಾಮಾರಿಗೆ 114 ಜನ ಬಲಿಯಾಗಿದ್ದಾರೆ. 681 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 3,312 ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1,243, ಮೈಸೂರು 374, ಬಳ್ಳಾರಿ 253, ದಾವಣಗೆರೆ 225, ಕಲಬುರಗಿ 196, ರಾಯಚೂರು 165, ಧಾರವಾಡ 157, ಬಾಗಲಕೋಟೆ 147, ದಕ್ಷಿಣ ಕನ್ನಡ 146, ವಿಜಯಪುರ 139, ಹಾಸನ 126, ಕೊಪ್ಪಳ 110, ಕೋಲಾರ 100, ತುಮಕೂರು 98, ಉಡುಪಿ 90, ರಾಮನಗರ 84, ಚಾಮರಾಜನಗರ 70, ಯಾದಗಿರಿ 68, ಮಂಡ್ಯ 66, ಬೆಳಗಾವಿ 54, ಉತ್ತರ ಕನ್ನಡ 53, ಬೆಂಗಳೂರು ಗ್ರಾಮಾಂತರ 50, ಹಾವೇರಿ 45, ಚಿಕ್ಕಮಗಳೂರು 45, ಗದಗ 42, ಚಿತ್ರದುರ್ಗ 38, ಕೊಡಗು 29, ಬೀದರ್ 28, ಚಿಕ್ಕಬಳ್ಳಾಪುರ 26, ಶಿವಮೊಗ್ಗ 00 ಕೊರೊನಾ ಪ್ರಕಣಗಳು ಪತ್ತೆಯಾಗಿಲ್ಲ.