ಬೆಂಗಳೂರು: ರಾಜ್ಯದಲ್ಲಿ ಬಿಂದಾಸ್ ಲೈಫ್ಗೆ ಬ್ರೇಕ್ ಬಿದ್ದಿದೆ. ಇಂದಿನಿಂದ ಹೊರಹೋಗುವ ಮುನ್ನ ಬೀ ಅಲರ್ಟ್ ಆಗಿರಬೇಕಾಗಿದೆ. ಯಾಕಂದರೆ ರಾಜ್ಯದಲ್ಲಿ ಇವತ್ತಿಂದ ಟಫ್ರೂಲ್ಸ್ ಜಾರಿಗೆ ಬರಲಿದೆ. ಲಾಕ್ಡೌನ್ ಇಲ್ಲದಿದ್ದರೂ ಎಲ್ಲಾ ಕಡೆ ಹಾಫ್ ಲಾಕ್ಡೌನ್ ಮಾಡಲಾಗುತ್ತದೆ.
Advertisement
ಹೌದು. ಕೊರೊನಾ ಕಂಟ್ರೋಲ್ಗೆ ಕರ್ನಾಟಕದಲ್ಲಿ ಟಫ್ರೂಲ್ಸ್ ಜಾರಿಗೆ ತರಲಾಗಿದೆ. ಕೊರೊನಾ ಚೈನ್ ಬ್ರೇಕ್ಗೆ ಈ ಟಫ್ರೂಲ್ಸ್ ಜಾರಿ ಮಾಡಿದ್ದು, ಇಂದಿನಿಂದ ಮೇ 4ರವರೆಗೆ ಕಠಿಣ ನಿಯಮ ಅನ್ವಯವಾಗುತ್ತದೆ. ರಾಜ್ಯಾದ್ಯಂತ ನೈಟ್ ಕಫ್ರ್ಯೂ, ವೀಕೆಂಡ್ ಕಫ್ರ್ಯೂ, ಸೆಕ್ಷನ್ 144 ನಿಷೇಧ ಹೇರಲಾಗುತ್ತದೆ.
Advertisement
Advertisement
ಬೆಂಗಳೂರಿನಲ್ಲಿ ಲಾಕ್ಡೌನ್ ಇಲ್ಲದಿದ್ದರೂ ನಿಷೇಧಾಜ್ಞೆ ಜಾರಿಗೆ ತರಲಾಗುತ್ತಿದ್ದು, ಬೆಂಗಳೂರಿನಲ್ಲಿ ಇಂದಿನಿಂದ ಬಿಂದಾಸ್ ಓಡಾಟಕ್ಕೆ ಬ್ರೇಕ್ ಬೀಳಲಿದೆ. ಜನ ಗುಂಪು ಸೇರೋದನ್ನ ತಪ್ಪಿಸಲು 144 ಸೆಕ್ಷನ್ ಹಾಕಲಾಗುತ್ತದೆ.
Advertisement
ಈ ಸಂಬಂಧ ಬೆಂಗಳೂರು ಕಮಿಷನರ್ ಕಮಲ್ ಪಂಥ್ ವಾರ್ನಿಂಗ್ ಮಾಡಿದ್ದು, ಬೆಂಗಳೂರಿನಲ್ಲಿ ಇಂದಿನಿಂದ 144 ಸೆಕ್ಷನ್ ಜಾರಿಯಾಗಲಿದ್ದು, 4 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮಾಲ್, ಶಾಪ್, ಪಬ್ಗಳಲ್ಲಿ ಗುಂಪು ಸೇರಿದರೆ ಕಠಿಣ ಕ್ರಮ. ಪಾರ್ಟಿಹಾಲ್, ಸಭೆ ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿದ್ರೆ ಕೇಸ್ ದಾಖಲಿಸಲಾಗುತ್ತದೆ. 107 ಸೆಕ್ಷನ್ ಅಡಿ ಬಾಂಡ್ ತೆಗೆದುಕೊಳ್ತೀವಿ. ಆ ಜಾಗವನ್ನು ಸೀಜ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.