ಬೆಂಗಳೂರು: ಕೊರೊನಾ 2ನೇ ಅಲೆ ನಿಯಂತ್ರಣಕ್ಕಾಗಿಹೊಸ ವರ್ಷಕ್ಕೆ 1 ವಾರ ನೈಟ್ ಕರ್ಫ್ಯೂ ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಪೂರ್ಣ ವಿರಾಮ ಇಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಯೋಚನೆಯೇ ಇಲ್ಲ ಅಂತ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ.
ತಜ್ಞರ ಸಮಿತಿ ಜೊತೆ ಸಭೆ ಮಾಡಿದ ಆರೋಗ್ಯ ಸಚಿವ ಸುಧಾಕರ್ ಕೂಡ ನೈಟ್ ಕರ್ಫ್ಯೂ ವಿಧಿಸುವ ಪರಿಸ್ಥಿತಿ ಬಂದಿಲ್ಲ. ತಜ್ಞರು ಕೂಡ ನೈಟ್ ಕರ್ಫ್ಯೂ ಹೇಳಿಲ್ಲ ಎಂದಿದ್ದಾರೆ.
Advertisement
Advertisement
ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಪಾರ್ಟಿಗೆ ಅವಕಾಶ ನೀಡುವುದು ಬೇಡ. ರಸ್ತೆಗಳಲ್ಲಿ ಪಾರ್ಟಿಗೆ ಅವಕಾಶ ನೀಡಿದರೆ ಜನ ಸೇರುತ್ತಾರೆ. ಪಬ್, ರೆಸ್ಟೋರೆಂಟ್ಗಳಲ್ಲಿ ಪಾರ್ಟಿಗೆ ಅನುಮತಿ ಕೊಡುವ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿ. ನೈಟ್ ಕರ್ಫ್ಯೂ ಬಗ್ಗೆ ಪಾಲಿಕೆ ಶಿಫಾರಸು ಮಾಡಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
Advertisement
ಕೊರೋನಾ 2ನೇ ಅಲೆ ಬರದಂತೆ ತಡೆಯಲು ವಿಭಿನ್ನವಾದ ಅಭಿಯಾನ ಕೈಗೊಳ್ಳಲಾಗಿದ್ದು, ವೇರ್ ಮಾಸ್ಕ್, ವಾಶ್ ಹ್ಯಾಂಡ್ಸ್, ವಾಚ್ ಡಿಸ್ಟನ್ಸ್ ಎಂಬ 3 ಡಬ್ಲ್ಯೂ ಸೂತ್ರದ ಮೂಲಕ ಜಾಗೃತಿ ಮೂಡಿಸಲಾಗ್ತಿದೆ.