– ರಾಜ್ಯದಲ್ಲಿ 12,828 ಸಕ್ರಿಯ ಪ್ರಕರಣಗಳು
– ಯಾವ ಜಿಲ್ಲೆಯಲ್ಲಿ ಎಷ್ಟು ಹೊಸ ಪ್ರಕರಣಗಳು?
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟವಾಗಿದ್ದು, ಇಂದು ಸಹ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇಂದು 1,798 ಹೊಸ ಪ್ರಕರಣಗಳು ವರದಿಯಾಗಿದ್ದು, ಏಳು ಜನರು ಸಾವನ್ನಪ್ಪಿದ್ದಾರೆ.
Advertisement
ರಾಜ್ಯದಲ್ಲಿ 12,828 ಸಕ್ರಿಯ ಪ್ರಕರಣಗಳಿದ್ದು, 134 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 1,030 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 12,432 ಜನರನ್ನು ಮಹಾಮಾರಿ ಬಲಿಪಡೆದುಕೊಂಡಿದೆ. ರಾಜ್ಯದಲ್ಲಿ ಇದುವರೆಗೂ 9,68,487 ಕೊರೊನಾ ಪ್ರಕರಣಗಳು ವರದಿಯಾಗಿವೆ.
Advertisement
Advertisement
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.91 ಮತ್ತು ಮರಣ ಪ್ರಮಾಣ ಶೇ.0.38ರಷ್ಟಿದೆ. ಇಂದು ರಾಜ್ಯದಲ್ಲಿ 94,043 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 15, ಬಳ್ಳಾರಿ 26, ಬೆಳಗಾವಿ 20, ಬೆಂಗಳೂರು ಗ್ರಾಮಾಂತರ 22, ಬೆಂಗಳೂರು ನಗರ 1,186, ಬೀದರ್ 49, ಚಾಮರಾಜನಗರ 4, ಚಿಕ್ಕಬಳ್ಳಾಪುರ 23, ಚಿಕ್ಕಮಗಳೂರು 2, ಚಿತ್ರದುರ್ಗ 5, ದಕ್ಷಿಣ ಕನ್ನಡ 52, ದಾವಣಗೆರೆ 10, ಧಾರವಾಡ 16, ಗದಗ 5, ಹಾಸನ 32, ಹಾವೇರಿ 0, ಕಲಬುರಗಿ 61, ಕೊಡಗು 3, ಕೋಲಾರ 20, ಕೊಪ್ಪಳ 5, ಮಂಡ್ಯ 18, ಮೈಸೂರು 59, ರಾಯಚೂರು 6, ರಾಮನಗರ 5, ಶಿವಮೊಗ್ಗ 14, ತುಮಕೂರು 43, ಉಡುಪಿ 66, ಉತ್ತರ ಕನ್ನಡ 0, ವಿಜಯಪುರ 29 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.