– ಸರ್ಕಾರಿ ಆಸ್ಪತ್ರೆಗಳಲ್ಲಿ ನೋ ಸ್ಟಾಕ್
ಬೆಂಗಳೂರು: ಕೊರೊನಾ ಓಡಿಸುವ ಸಂಜೀವಿನಿ ಆಗಿರುವ ವ್ಯಾಕ್ಸಿನ್ ವಿಷಯದಲ್ಲೂ ರಾಜಕೀಯ ನಡೀತಿದೆ. ಕಾಸ್ ಇದ್ದೋನೇ ಬಾಸ್ ಅನ್ನೋ ಹಾಗೆ ವ್ಯಾಕ್ಸಿನ್ ಹಂಚಿಕೆ ಆಗ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಿನಕ್ಕೆ ನೂರೋ ಅಥವಾ ಗರಿಷ್ಠ ಅಂದರೆ 300 ಜನಕ್ಕೋ ವ್ಯಾಕ್ಸಿನ್ ಕೊಡೋದು ಅನ್ನುತ್ತಿದ್ದಾರೆ. ಅದರಲ್ಲೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯೇ ಸಿಗುತ್ತಿಲ್ಲ.
Advertisement
ಖಾಸಗಿ ಆಸ್ಪತ್ರೆಯಲ್ಲಿ 18 ವರ್ಷದಿಂದ ಮೇಲ್ಪಟ್ಟವರಿಗೂ ಲಸಿಕೆ ಸಿಗುತ್ತಿದೆ. ದಿನವೊಂದಕ್ಕೆ 1000 ದಿಂದ 2,000ಕ್ಕೂ ಅಧಿಕ ಮಂದಿಗೆ ಲಸಿಕೆ ವಿತರಣೆ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಲಸಿಕೆ, ಖಾಸಗಿ ಆಸ್ಪತ್ರೆಗಳಿಗೆ ಹೇಗೆ ಸಿಗುತ್ತಿದೆ ಅನ್ನೋದು ಪ್ರಶ್ನೆಯಾಗಿದೆ.
Advertisement
ಬೆಂಗಳೂರಿನ ಸಿವಿ ರಾಮನ್ ನಗರದ ಬಿಜೆಪಿ ಶಾಸಕ ರಘು, ಸರ್ಕಾರದಿಂದ ಉಚಿತವಾಗಿ ನೀಡುತ್ತಿರೋ ಲಸಿಕೆಯನ್ನ ಪಿಎಚ್ಸಿ& ಸಾರ್ವಜನಿಕ ಆಸ್ಪತ್ರೆಯಲ್ಲಿ ವಿತರಣೆಗೆ ಬ್ರೇಕ್ ಹಾಕಿಸಿ, ನ್ಯೂ ತಿಪ್ಪಸಂದ್ರದ ಕಲ್ಯಾಣ ಮಂಟಪಕ್ಕೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ. ಕ್ಷೇತ್ರಕ್ಕೆ ನಿತ್ಯ 400 ಡೋಸ್ ಬರ್ತಿದೆ. ಇದನ್ನು ಜನ ಸಾಮಾನ್ಯರಿಗೆ ಕೊಡೋ ಬದಲಿಗೆ ತಮಗೆ ಬೇಕಾದವರಿಗೆ ಕೊಡಿಸುತ್ತಿದ್ದಾರೆ ಅನ್ನೋ ಆರೋಪವೂ ಎದುರಾಗಿದೆ. ಕಲ್ಯಾಣ ಮಂಟಪ ಎದುರು ದೊಡ್ಡದಾದ ಫ್ಲೆಕ್ಸ್ ಹಾಕಿಸಿಕೊಂಡಿದ್ದಾರೆ. ಸ್ಥಳೀಯರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ದೇಶದಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲ. ವರ್ಷಾಂತ್ಯಕ್ಕೆ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಲಿದೆ. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಕೇಂದ್ರ ಸರ್ಕಾರ 23 ಕೋಟಿಗೂ ಅಧಿಕ ಲಸಿಕೆ ಪೂರೈಸಲಾಗಿದೆ. ರಾಜ್ಯ & ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.57 ಕೋಟಿ ಲಸಿಕೆ ಸ್ಟಾಕ್ ಇದೆ. ವ್ಯರ್ಥವಾಗಿರುವ ಲಸಿಕೆ ಸೇರಿಸಿ 21 ಕೋಟಿ 51 ಲಕ್ಷದ 48 ಸಾವಿರದ 659 ಡೋಸ್ ಬಳಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಟಾಕೇ ಇಲ್ಲ. ಇವತ್ತು 5.67 ಲಕ್ಷ ಕೋವಿಶೀಲ್ಡ್ ಸೇರಿ ರಾಜ್ಯಕ್ಕೆ ಒಟ್ಟು 1,45,79,010 ಡೋಸ್ ಬಂದಿದೆ.
ರಾಜ್ಯಗಳಿಗೆ ಶೇ.50ರಷ್ಟು ವ್ಯಾಕ್ಸಿನ್ ಖರೀದಿಯ ಅಧಿಕಾರ ಇದೆ. ಆದರೆ ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಮಾತ್ರ ಖರೀದಿಗೆ ಅವಕಾಶ ಇದೆ. ಆದಾಗ್ಯೂ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಸಿಗ್ತಿಲ್ಲ.
ಖಾಸಗಿ ಆಸ್ಪತ್ರೆಗಳಲ್ಲಿ ಯಾಕೆ ಲಸಿಕೆ ಸಿಗ್ತಿದೆ?
1. ಶ್ರೀಘ್ರಗತಿ ವ್ಯಾಕ್ಸಿನ್ ಖರೀದಿ ಪ್ರಕ್ರಿಯೆ, ಸರಬರಾಜು, ವಿತರಣೆ
(ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಯ ಒಂದೇ ಸೆಂಟರ್ನಲ್ಲಿ 5 ಸಾವಿರ ವ್ಯಾಕ್ಸಿನ್ ಕೊಡ್ತಾರೆ + ರಾಜಕೀಯ ನಾಯಕರ ಅಧೀನದಲ್ಲಿ ಖಾಸಗಿ ಆಸ್ಪತ್ರೆಗಳು )
2. ಸ್ಟಾಕ್ ಬಂದ ತಕ್ಷಣ ಶೆಡ್ಯೂಲ್ಡ್ ಮಾಡಿ ಕೋಲ್ಡ್ ಚೈನ್ ವ್ಯವಸ್ಥೆ ಮೂಲಕ ವಿತರಣೆ
3. ಲಸಿಕಾ ಉತ್ಪಾದನಾ ಕೇಂದ್ರಗಳಿಂದಲೇ ನೇರವಾಗಿ ಖರೀದಿ
4. ಉತ್ಪಾದನಾ ಕಂಪನಿಗಳಿಗೆ ಡೆಪಾಸಿಟ್ ಹಣ ನೀಡಿ, ಸಾಮರ್ಥ್ಯಕ್ಕೆ ತಕ್ಕಂತೆ ಲಸಿಕೆ ಖರೀದಿ
5. ವ್ಯವಹಾರದ ಮನಸ್ಥಿತಿಯ ಮೇಲೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚು ವ್ಯಾಕ್ಸಿನ್
ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕೆ ಸಿಗ್ತಿಲ್ಲ ಲಸಿಕೆ?
1. ಸರ್ಕಾರಕ್ಕೆ ಲಸಿಕೆ ಖರೀದಿಸುವ ಮನಸ್ಸಿಲ್ಲ
2. ಡೆಪಾಸಿಟ್ ಹಣ ನೀಡುವ ಸಾಮರ್ಥ್ಯ ಇದ್ರೂ ಜನರ ಕಾಳಜಿ ಇಲ್ಲ
3. ನಿಧಾನವಾಗಿ ಹಂತ ಹಂತವಾಗಿ ಕೊಡೋಣ ಅನ್ನೋ ಮನಸ್ಥಿತಿ