– ಬೆಂಗಳೂರಿನಲ್ಲಿ 13,782 ಕೇಸ್ ಪತ್ತೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣ ಕೇಕೆ ಮುಂದುವರಿಸಿದ್ದು, ಇಂದು 21,794 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದಿನದಿಂದ ದಿನಕ್ಕೆ ಹೆಚ್ಚು ಕೇಸ್ಗಳು ಪತ್ತೆಯಾಗುತ್ತಿವೆ. ಇಂದು ರಾಜ್ಯದಲ್ಲಿ ಬರೋಬ್ಬರಿ 149 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಬೆಂಗಳೂರು ನಗರದಲ್ಲಿ 13,782, ತುಮಕೂರು 1,055, ಕಲಬುರಗಿ 818, ಮೈಸೂರು 699, ದಕ್ಷಿಣ ಕನ್ನಡ 482, ಮಂಡ್ಯ 413 ಹಾಗೂ ಬಳ್ಳಾರಿಯಲ್ಲಿ 406 ಮಂದಿಗೆ ಸೋಂಕು ಬಂದಿದೆ.
Advertisement
Advertisement
ರಾಜ್ಯದಲ್ಲಿ ಇಂದು 4,571 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,98,644ಕ್ಕೆ ಏರಿಕೆ ಆಗಿದೆ. ಈ ಪೈಕಿ 1,59,158 ಸಕ್ರಿಯ ಪ್ರಕರಣಗಳಿದ್ದರೆ 10,25,821 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Advertisement
ಒಟ್ಟು ಸಾವಿನ ಸಂಖ್ಯೆ 13,646ಕ್ಕೆ ಏರಿಕೆ ಆಗಿದ್ದು, ಐಸಿಯುನಲ್ಲಿ 751 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 16,531 ಆಂಟಿಜನ್, 1,30,957 ಆರ್ಟಿಸಿ ಪಿಸಿಆರ್ ಸೇರಿದಂತೆ ಒಟ್ಟು 1,47,488 ಕೊರೊನಾ ಪರೀಕ್ಷೆ ಮಾಡಲಾಗಿದೆ.
ಇಂದಿನ 20/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/aagTgdP8tt@mla_sudhakar @DVSadanandGowda @ShobhaBJP @PCMohanMP @Tejasvi_Surya @CTRavi_BJP @kiranshaw @WFRising @citizenkamran @RCBTweets @NammaKarnataka_ pic.twitter.com/VND1LIRqBz
— K’taka Health Dept (@DHFWKA) April 20, 2021
ಬೆಂಗಳೂರು ನಗರದಲ್ಲಿ 181, ಕಲಬುರಗಿ 107, ತುಮಕೂರು 69 ಹಾಗೂ ಮೈಸೂರಿನಲ್ಲಿ 51 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.