– ಹೆಮ್ಮಾರಿಗೆ ಏಳು ಮಂದಿ ಬಲಿ
– ದ.ಕನ್ನಡ, ಬೆಂಗ್ಳೂರಿಗೆ ಬಿಗ್ ಶಾಕ್
ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೊನಾ ಮಹಾ ಸ್ಫೋಟ ಸಂಭವಿಸಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದ 317 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7,530ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ, ಕಲಬುರಗಿ, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಇಂದು ಹೆಚ್ಚಿನ ಸಂಖ್ಯೆಯ ಜನರಿಗೆ ಸೋಂಕು ಪತ್ತೆಯಾಗಿದೆ. ಬೆಂಗಳೂರಿನ 47 ಮಂದಿ ಸೋಂಕಿತರಲ್ಲಿ 14 ಜನರಿಗೆ ತೀವ್ರ ಜ್ವರದ ರೀತಿಯ ಅನಾರೋಗ್ಯ ಹಾಗೂ 05 ಮಂದಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಇಂದೊಂದೆ ದಿನ ಏಳು ಮಂದಿ ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತ ಸಂಖ್ಯೆ 94ಕ್ಕೆ ಏರಿಕೆ ಕಂಡಿದೆ.
Advertisement
Advertisement
ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ ಪ್ರಕಾರ, ದಕ್ಷಿಣ ಕನ್ನಡ 79, ಕಲಬುರಗಿ 63, ಬಳ್ಳಾರಿ 53, ಬೆಂಗಳೂರು 47, ಧಾರವಾಡ 8, ಉಡುಪಿ 7, ಶಿವಮೊಗ್ಗ 7, ರಾಯಚೂರು 6, ಯಾದಗಿರಿ 6, ಉತ್ತರ ಕನ್ನಡ 6, ಹಾಸನ 5, ವಿಜಯಪುರ 4, ಮೈಸೂರು 4, ಗದಗ 4, ರಾಮನಗರ 4, ಚಿಕ್ಕಮಗಳೂರು 4, ಕೊಪ್ಪಳ 4, ಬೆಳಗಾವಿ 03, ಬೀದರ್ 2 ಹಾಗೂ ತುಮಕೂರು ಒಬ್ಬರಿಗೆ ಸೋಂಕು ದೃಢಪಟ್ಟಿದೆ.
Advertisement
ಇಂದು ಪತ್ತೆಯಾದ 317 ಸೋಂಕಿತರ ಪೈಕಿ 108 ಮಂದಿ ಅಂತರಾಜ್ಯ ಹಾಗೂ 78 ಮಂದಿಗೆ ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 322 ಜನರು ಕೊರೊನಾದಿಂದ ಗುಣಮುಖರಾಗಿ ಕೋವಿಡ್ 19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 7,530 ಪ್ರಕರಣಗಳಲ್ಲಿ ರಾಜ್ಯದಲ್ಲಿ 2,976 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 4,456 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು ಕೊರೊನಾ ತನ್ನ ಮರಣ ಕೇಕೆಯನ್ನು ಮುಂದುವರಿಸಿದ್ದು ಏಳು ಮಂದಿ ಸಾವನ್ನಪ್ಪಿರೋದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ.
Advertisement
ಇಬ್ಬರ ಸಾವು:
1. ರೋಗಿ-5336: ಬೆಂಗಳೂರಿನ 72 ವರ್ಷದ ವೃದ್ಧ. ರೋಗಿ-4317ರ ಸಂಪರ್ಕ ಹೊಂದಿದ್ದು, ಡಿ.ಎಂ., ಹೆಚ್.ಟಿ.ಎನ್ ಮತ್ತು ಸಿ.ಕೆ.ಡಿ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.
2. ರೋಗಿ-7227: ಬೆಂಗಳೂರಿನ 60 ವರ್ಷದ ವೃದ್ಧ. ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.
3. ರೋಗಿ-7229: ಬೆಂಗಳೂರಿನ 65 ವರ್ಷದ ವೃದ್ಧೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜೂನ್ 13ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.
4. ರೋಗಿ-7253: ಬೆಂಗಳೂರಿನ 85 ವರ್ಷದ ವೃದ್ಧೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜೂನ್ 13ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.
5. ರೋಗಿ-7259: ಬೆಂಗಳೂರಿನ 86 ವರ್ಷದ ವೃದ್ಧೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜೂನ್ 13ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.
6. ರೋಗಿ-7261: ರಾಮನಗರ ಜಿಲ್ಲೆಯ 48 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಹಿನ್ನೆಲೆ ಜೂನ್ 13ರಂದು ಬೆಂಗಳೂರು ನಗರದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.
7. ರೋಗಿ-7524: ಬೀದರ್ ಜಿಲ್ಲೆಯ 49 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಹಿನ್ನೆಲೆ ಜೂನ್ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.