– ರಾಜಧಾನಿಯಲ್ಲಿ ಶೇ.3.23ಕ್ಕೆ ಇಳಿಕೆಯಾದ ಪಾಸಿಟಿವಿಟಿ ರೇಟ್
– ಎಂಟು ಜಿಲ್ಲೆಗಳಲ್ಲಿ ಮರಣ ಪ್ರಮಾಣ ಶೂನ್ಯ
ಬೆಂಗಳೂರು: ರಾಜ್ಯದಲ್ಲಿಂದು 7,810 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ರೇಟ್ ಶೇ.6.02ಕ್ಕೆ ಇಳಿಕೆಯಾಗಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದ್ದು, ಇಂದು 1,348 ಪ್ರಕರಣ ದಾಖಲಾಗಿವೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಶೇ.3.23ಕ್ಕೆ ಇಳಿದಿದೆ.
Advertisement
ಇಂದು ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ 1,29,617 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರು ನಗರದಲ್ಲಿಯೇ 41,618 ಸ್ಯಾಂಪಲ್ ಗಳ ಪರೀಕ್ಷೆಯಾಗಿದೆ. ಇಂದು ಒಟ್ಟು 18,648 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎಂಟು ಜಿಲ್ಲೆಗಳಲ್ಲಿ ಮರಣ ಪ್ರಮಾಣ ಶೂನ್ಯ ದಾಖಲಾಗಿದೆ. ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕಲಬುರಗಿ, ಮಂಡ್ಯ, ರಾಮನಗರ ಮತ್ತು ಯಾದಗಿರಿಯಲ್ಲಿಂದು ಯಾವುದೇ ಮರಣಗಳು ಸಂಭವಿಸಿಲ್ಲ.
Advertisement
Advertisement
ಸದ್ಯ ರಾಜ್ಯದಲ್ಲಿ 1,80,835 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕೊರೊನಾಗೆ 125 ಮಂದಿ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 32,913ಕ್ಕೇರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 85,995 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಮರಣ ಪ್ರಮಾಣ ಶೇ.1.60ರಷ್ಟಿದೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 62, ಬಳ್ಳಾರಿ 141, ಬೆಳಗಾವಿ 266, ಬೆಂಗಳೂರು ಗ್ರಾಮಾಂತರ 154, ಬೆಂಗಳೂರು ನಗರ 1,348, ಬೀದರ್ 7, ಚಾಮರಾಜನಗರ 129, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 223, ಚಿತ್ರದುರ್ಗ 128, ದಕ್ಷಿಣ ಕನ್ನಡ 391, ದಾವಣಗೆರೆ 391, ಧಾರವಾಡ 148, ಗದಗ 73, ಹಾಸನ 581, ಹಾವೇರಿ 64, ಕಲಬುರಗಿ 24, ಕೊಡಗು 125, ಕೋಲಾರ 164, ಕೊಪ್ಪಳ 76, ಮಂಡ್ಯ 467, ಮೈಸೂರು 1,251, ರಾಯಚೂರು 30, ರಾಮನಗರ 47, ಶಿವಮೊಗ್ಗ 393, ತುಮಕೂರು 352, ಉಡುಪಿ 223, ಉತ್ತರ ಕನ್ನಡ 250, ವಿಜಯಪುರ 96 ಮತ್ತು ಯಾದಗಿರಿಯಲ್ಲಿ 22 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.