ಬೆಂಗಳೂರು: ಕೊರೊನಾ ರಾಕ್ಷಸಿ ಮರಣ ನರ್ತನ ಮುಂದವರಿದಿದ್ದು, ಇವತ್ತು 490 ಜನರನ್ನ ಬಲಿ ಪಡೆದುಕೊಂಡಿದೆ. ರಾಜ್ಯದಲ್ಲಿ 47,930 ಹೊಸ ಪ್ರಕರಣಗಳು ವರದಿಯಾಗಿದ್ದು, 5,64,485 ಸಕ್ರಿಯ ಪ್ರಕರಗಳಿವೆ. ಕೊರೊನಾ ಸೋಂಕಿತರ ಸಂಖ್ಯೆ 19,34,378ಕ್ಕೇರಿಕೆಯಾಗಿದೆ.
ಇದುವರೆಗೂ ರಾಜ್ಯದಲ್ಲಿ ಕೊರೊನಾಗೆ 17,776 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂದು 31,796 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.32.17 ಮತ್ತು ಮರಣ ಪ್ರಮಾಣ ಶೇ.1.02ಕ್ಕೆ ಏರಿಕೆ ಕಂಡಿದೆ.
Advertisement
Advertisement
ಇಂದು ಒಟ್ಟು 1,46,491 ಸ್ಯಾಂಪಲ್ (ರಾಪಿಡ್ ಆಂಟಿಜೆನ್ 9,828 + ಆರ್ ಟಿ ಪಿಸಿಆರ್ 1,36,663) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇನ್ನು ಸಿಲಿಕಾನ್ ಸಿಟಿಯಲ್ಲಿಂದು 20,897 ಹೊಸ ಪ್ರಕರಣಗಳು ವರದಿಯಾಗಿದ್ದು, 281 ಜನ ಸಾವನ್ನಪ್ಪಿದ್ದಾರೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1,315, ಬಳ್ಳಾರಿ 2,141, ಬೆಳಗಾವಿ 613, ಬೆಂಗಳೂರು ಗ್ರಾಮಾಂತರ 1,066, ಬೆಂಗಳೂರು ನಗರ 20,897, ಬೀದರ್ 313, ಚಾಮರಾಜನಗರ 930, ಚಿಕ್ಕಬಳ್ಳಾಪುರ 657, ಚಿಕ್ಕಮಗಳೂರು 582, ಚಿತ್ರದುರ್ಗ 111, ದಕ್ಷಿಣ ಕನ್ನಡ 1,694, ದಾವಣಗೆರೆ 453, ಧಾರವಾಡ 777, ಗದಗ 368, ಹಾಸನ 2,349, ಹಾವೇರಿ 370, ಕಲಬುರಗಿ 1,062, ಕೊಡಗು 576, ಕೋಲಾರ 424, ಕೊಪ್ಪಳ 291, ಮಂಡ್ಯ 1,959, ಮೈಸೂರು 1,854, ರಾಯಚೂರು 702, ರಾಮನಗರ 604, ಶಿವಮೊಗ್ಗ 650, ತುಮಕೂರು 2,001, ಉಡುಪಿ 962, ಉತ್ತರ ಕನ್ನಡ 917, ವಿಜಯಪುರ 597 ಮತ್ತು ಯಾದಗಿರಿಯಲ್ಲಿ 695 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.