ಬೆಂಗಳೂರು: ರಾಜ್ಯದಲ್ಲಿಂದು 2,154 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 17 ಜನರು ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ 8,60,082ಕ್ಕೆ ಏರಿಕೆಯಾಗಿದ್ದು, ಇದುವರೆಗೂ 11,508 ಸೋಂಕಿತರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ಸದ್ಯ ರಾಜ್ಯದಲ್ಲಿ 27,965 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 2,198 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 8, ಬಳ್ಳಾರಿ 34, ಬೆಳಗಾವಿ 51, ಬೆಂಗಳೂರು ಗ್ರಾಮಾಂತರ 60, ಬೆಂಗಳೂರು ನಗರ 1,195, ಬೀದರ್ 3, ಚಾಮರಾಜನಗರ 14, ಚಿಕ್ಕಬಳ್ಳಾಪುರ 21, ಚಿಕ್ಕಮಗಳೂರು 17, ಚಿತ್ರದುರ್ಗ 24, ದಕ್ಷಿಣ ಕನ್ನಡ 40, ದಾವಣಗೆರೆ 29, ಧಾರವಾಡ 12, ಗದಗ 11, ಹಾಸನ 103, ಹಾವೇರಿ 20, ಕಲಬುರಗಿ 15, ಕೊಡಗು 20, ಕೋಲಾರ 39, ಕೊಪ್ಪಳ 13, ಮಂಡ್ಯ 46, ಮೈಸೂರು 137, ರಾಯಚೂರು 19, ರಾಮನಗರ 11, ಶಿವಮೊಗ್ಗ 38, ತುಮಕೂರು 61, ಉಡುಪಿ 27, ಉತ್ತರ ಕನ್ನಡ 42, ವಿಜಯಪುರ 33 ಮತ್ತು ಯಾದಗಿರಿಯಲ್ಲಿ 11 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.