ಮುಂದಿನ 4-5 ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಲಿದೆ. ಶೀಘ್ರದಲ್ಲೇ ಮುಂಗಾರು ದುರ್ಬಲವಾಗುವ ಸಾಧ್ಯತೆಯಿದ್ದು, ನಂತರ ಮಳೆಯ ಅಬ್ಬರ ಇಳಿಮುಖವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
Advertisement
ರಾಜಧಾನಿ ಬೆಂಗಳೂರಿನಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 28-19
ಮಂಗಳೂರು: 29-15
ಶಿವಮೊಗ್ಗ: 27-21
ಬೆಳಗಾವಿ: 25-21
ಮೈಸೂರು: 29-19
Advertisement
ಮಂಡ್ಯ: 31-20
ರಾಮನಗರ: 30-20
ಮಡಿಕೇರಿ: 22-17
ಹಾಸನ: 26-19
ಚಾಮರಾಜನಗರ: 29-20
ಚಿಕ್ಕಬಳ್ಳಾಪುರ: 28-18
ಕೋಲಾರ: 31-20
ತುಮಕೂರು: 29-19
ಉಡುಪಿ: 29-15
ಕಾರವಾರ: 28-15
ಚಿಕ್ಕಮಗಳೂರು: 25-18
ದಾವಣಗೆರೆ: 28-21
ಚಿತ್ರದುರ್ಗ: 28-21
ಹಾವೇರಿ: 28-21
ಗದಗ: 28-21
ಕೊಪ್ಪಳ: 29-22
ರಾಯಚೂರು: 33-24
ಯಾದಗಿರಿ: 33-24
ವಿಜಯಪುರ: 29-19
ಬೀದರ್: 29-22
ಕಲಬುರಗಿ: 32-23
ಬಾಗಲಕೋಟೆ: 31-23