ಬೆಂಗಳೂರು: ಬಿಎಸ್ವೈ ನೇತೃತ್ವದ ಸರ್ಕಾರ, ಮತ್ತೆ ಲಾಕ್ಡೌನ್ ಜಾರಿ ಮಾಡ್ಬೇಕಾ ಬೇಡ್ವಾ ಎಂಬ ಸಂದಿಗ್ಧತೆಯಲ್ಲಿ ಸಿಲುಕಿದ್ರೆ, ರಾಜ್ಯದ ಹಲವು ಕಡೆ, ಸ್ಥಳೀಯ ಆಡಳಿತಗಳು, ಜನರ ಸಹಕಾರದಿಂದ ಸ್ವಯಂಪ್ರೇರಿತವಾಗಿ ಬಂದ್, ಲಾಕ್ಡೌನ್ ಜಾರಿ ಮಾಡಿಕೊಳ್ತಿವೆ.
ಮೈಸೂರಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿರುವ ಕಾರಣ ಗುರುವಾರದಿಂದ ದೇವರಾಜ ಮಾರುಕಟ್ಟೆ, ಮನ್ನಾರ್ಸ್ ಮಾರುಕಟ್ಟೆ, ಬೋಟಿ ಬಜಾರ್, ಸಂತೇಪೇಟೆ, ಶಿವರಾಂಪೇಟೆ ಸೇರಿ ಪ್ರಮುಖ ಸ್ಥಳಗಳನ್ನು ನಾಲ್ಕು ದಿನ ಬಂದ್ ಮಾಡಿ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಸುತ್ತೂರು ಮಠಕ್ಕೆ ಭಕ್ತರ ಪ್ರವೇಶವನ್ನು ರದ್ದು ಮಾಡಲಾಗಿದೆ.
Advertisement
Advertisement
ಅಂತಾರಾಜ್ಯದಿಂದ ಮೀನು ಖರೀದಿಗೆ ಬಂದವರಿಂದ ಮಂಗಳೂರಿನ ಮೀನುಗಾರರೊಬ್ಬರಿಗೆ ಸೋಂಕು ವ್ಯಾಪಿಸಿರುವ ಕಾರಣ, ಮೀನುಗಾರಿಕಾ ಬಂದರನ್ನು ಸೀಲ್ಡೌನ್ ಮಾಡಲಾಗಿದೆ. ಕನಕಪುರ, ಮಾಗಡಿ ಬಳಿಕ ಇಂದಿನಿಂದ ರಾಮನಗರವೂ ಲಾಕ್ಡೌನ್ ಆಗಿದೆ. ಹರಿಹರದಲ್ಲಿ ಸ್ವಯಂಪ್ರೇರಿತ ಲಾಕ್ಡೌನ್ಗೆ ಶಾಸಕ ರಾಮಪ್ಪ ಮನವಿ ಮಾಡಿದ್ದಾರೆ.