ಬೆಂಗಳೂರು: ಸಂಕ್ರಾಂತಿ ಬಳಿಕ ಅಥವಾ ಫೆಬ್ರವರಿಯಲ್ಲಿ ಮಂಡನೆಯಾಗುವ ಬಜೆಟ್ ಮುನ್ನ ಸಚಿವ ಸಂಪುಟಕ್ಕೆ ಸರ್ಜರಿಯಾಗುವ ಸಾಧ್ಯತೆ ಇದೆ.
Advertisement
ಕೇಂದ್ರ ಬಜೆಟ್ ಬಳಿಕ ರಾಜ್ಯದಲ್ಲಿ ಬಜೆಟ್ ಫೆಬ್ರವರಿ ಎರಡನೇ ಅಥವಾ ಮೂರನೇ ವಾರದಲ್ಲಿ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಆದರೆ ಬಜೆಟ್ ಮಂಡನೆ ತನಕ ಕಾಯಲು ವಲಸಿಗ ಹಕ್ಕಿಗಳಿಗೆ ಆಗ್ತಿಲ್ಲ, ಕಾಯಿಸಲು ಯಡಿಯೂರಪ್ಪಗೂ ಕೂಡ ಇಷ್ಟ ಇಲ್ಲ. ಹಾಗಾಗಿ ಇಂದು, ನಾಳೆ ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರವಾಸ ಮಾಡಲಿದ್ದಾರೆ. ಈ ಪ್ರವಾಸದ ವೇಳೆ ಸಂಪುಟ ಸರ್ಜರಿ ಬಗ್ಗೆ ಮಹತ್ವದ ಮಾತುಕತೆ ಸಾಧ್ಯತೆ ಇದೆ.
Advertisement
Advertisement
ಒಂದು ವೇಳೆ ಹೈಕಮಾಂಡ್ ಸರ್ಜರಿಗೆ ಒಲವು ತೋರಿದ್ರೆ ಎರಡು ಆಯ್ಕೆಗಳನ್ನು ಯಡಿಯೂರಪ್ಪ ಮುಂದಿಡಲಿದ್ದಾರೆ. ಸಂಪುಟ ವಿಸ್ತರಣೆ ಹಾಗೂ ಸಂಪುಟ ಪುನಾರಚನೆ ಆಯ್ಕೆ ಮುಂದಿಡಲಿದ್ದಾರೆ. ವಿಸ್ತರಣೆ ಆದ್ರೆ 3+3 ಸೂತ್ರದಡಿ ಸರ್ಜರಿ ಸಾಧ್ಯತೆ ಇದ್ದು, ಮೂರು ವಲಸಿಗ, ಮೂಲರಿಗೆ ಸಮನಾಗಿ ಹಂಚುವುದಾಗಿದೆ. ಪುನಾರಚನೆಯಾದ್ರೆ ನಾಲ್ವರಿಗೆ ಕೊಕ್ ಕೊಟ್ಟು, 10 ಹೊಸ ಸೇರ್ಪಡೆಗೆ ಪ್ಲಾನ್ ಮಾಡಲಾಗಿದೆ. ಆ 10 ಹೊಸ ಸೇರ್ಪಡೆ ಪ್ಲಾನ್ ನಲ್ಲಿ 3+7 ಸೂತ್ರ ಮೂರು ವಲಸಿಗರು, 7 ಮೂಲ ಬಿಜೆಪಿಗರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಿನಲ್ಲಿ ಸಂಕ್ರಾಂತಿ ನಂತರದ ಸಂಪುಟ ಸರ್ಜರಿ ತೀವ್ರ ಕುತೂಹಲ ಮೂಡಿಸಿದೆ.