ಚಿಕ್ಕಮಗಳೂರು: ಹತ್ತು ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆಮೇಲೆ ಡಿಐಜಿ, ಐಜಿ ಆಗಿ ಎಸಿ ರೂಮಲ್ಲಿ ಕೂತು ಕೆಲಸ ಮಾಡುಲು ಆಸಕ್ತಿ ಇಲ್ಲ ಎಂದಾಗ, ಸಿದ್ಧಾರ್ಥ್ ಅಣ್ಣಾ ಮಾತ್ರ ಧೈರ್ಯವಾಗಿ ಹೇಳಿದ್ದು, ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು. ನನ್ನ ರಾಜೀನಾಮೆಯನ್ನ ನಾವಿಬ್ಬರೂ ಸೇರಿ ಡಿಸೈಡ್ ಮಾಡಿದ್ದು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ್ ಹೆಗ್ಡೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
Advertisement
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ನಾನು ಸಿದ್ಧಾರ್ಥ್ ಹೆಗ್ಡೆ ಅವರ ಕೆಫೆ ಡೇ ಚೇಂಬರ್ ರೂಂನಲ್ಲಿ ಕೂತು ಮೂರೂವರೆ ಗಂಟೆ ಮಾತನಾಡಿದ್ದೆವು ಎಂದು ತಿಳಿಸಿದರು.
Advertisement
ಎರಡು ಜನ ಕಾರ್ ಡೋರ್ ಓಪನ್ ಮಾಡಿ ಬಿಡುತ್ತಾರೆ. ನಾಲ್ಕು ಜನ ಸೆಲ್ಯೂಟ್ ಮಾಡುತ್ತಾರೆ. ನನಗೆ ಅದರಿಂದ ಸಂತೋಷವಿಲ್ಲ. ಕೃಷಿ ಮಾಡಬೇಕು, ಊರಿಗೆ ಹೋಗಬೇಕು. ಸಾಧಾರಣ ಮನುಷ್ಯನಂತೆ ಬದುಕಬೇಕು ಹಾಗೂ ಸಾಮಾನ್ಯ ಮನುಷ್ಯನ ಜೀವನವನ್ನ ಬದಲಾವಣೆ ಮಾಡಬೇಕೆಂಬ ಆಸೆ ಸರ್ ಎಂದು ಅವರಿಗೆ ಹೇಳಿದ್ದೆ. ಆಗ ಅವರು, ಧೈರ್ಯವಾಗಿ ಹೇಳಿದ್ದರು. ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು ಎಂದು ಸಿದ್ಧಾರ್ಥ್ ಹೆಗ್ಡೆಯವರನ್ನ ನೆನಪಿಸಿಕೊಂಡರು.
Advertisement
Advertisement
ಯಾವ ಡೇಟ್ನಲ್ಲಿ ಪೇಪರ್ ಟೈಪ್ ಮಾಡಬೇಕು ಎಂದು ನಾವಿಬ್ಬರು ಡಿಸೈಡ್ ಮಾಡಿದ್ದೆವು. ರಾಜೀನಾಮೆ ಕೊಟ್ಟ ಬಳಿಕ ಬಾಂಬೆಯಿಂದ ಫೋನ್ ಮಾಡಿದ್ದರು. ಬಹಳ ಕಷ್ಟದ ಕೆಲಸ ಯಾರೂ ಮಾಡಲ್ಲ. ಜನ ನಿಮಗೆ ಮೂರ್ಖ ಎನ್ನಬಹುದು, ಫೂಲ್ ಎನ್ನಬಹುದು. ಆದರೆ ನನಗೆ ನಿಮ್ಮ ಉದ್ದೇಶ ಏನೆಂದು ಗೊತ್ತು ಎಂದಿದ್ದರು. ನಾನು ಏನು ಮಾಡಿದರು ಅವರು ಮೇಲಿಂದ ನೋಡುತ್ತಿದ್ದಾರೆ, ಅವರು ಯಾವಾಗಲು ನನ್ನೊಂದಿಗೆ ಇರುತ್ತಾರೆ. ನನಗೆ ಗೈಡ್ ಮಾಡಿದ್ದರು, ಮುಂದೆಯೂ ಅವರು ನನ್ನೊಂದಿಗೆ ನಿಂತು ಗೈಡ್ ಮಾಡುತ್ತಿರುತ್ತಾರೆ ಎಂದರು.