-ರಾಜ್ಯದ ಹಲವೆಡೆ ಮಳೆ
ಬೆಂಗಳೂರು: ಇಂದು ಸಂಜೆಯಿಂದಲೇ ರಾಜಧಾನಿಯಲ್ಲಿ ವರುಣದೇವ ಅಬ್ಬರಿಸುತ್ತಿದ್ದು, ನಗರದ ರಸ್ತೆಗಳು ಕೆರೆಯಂತಾಗಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಇಂದು ಸಂಜೆಯಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು.
ಬೆಂಗಳೂರಿನ ಮಲ್ಲೇಶ್ವರಂ, ಶೇಷಾದ್ರಿಪುರಂ, ಸದಶಿವನಗರ, ರಾಜಾಜಿನಗರ, ಯಶವಂತಪುರ, ವಸಂತನಗರ, ಶಿವಾಜಿನಗರ ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ಹೆಬ್ಬಾಳ ಸೇರಿದಂತೆ ಹಲವೆಡೆ ಭಾರೀ ಮಳೆ ಆಗುತ್ತಿದೆ. ಶಿವನಾಂದ ಸರ್ಕಲ್ ಬಳಿ ರಸ್ತೆಗಳು ಕರೆಯಾಗಿ ಬದಲಾಗಿದ್ದು, ವಾಹನ ಸವಾರರು ಎತ್ತ ಹೋಗಬೇಕೆಂದು ಚಿಂತೆಯಲ್ಲಿ ಮುಳುಗಿದ್ದಾರೆ. ಶಿವಾನಂದ ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ 2 ಅಡಿಯಷ್ಟು ನೀರು ನಿಂತಿದೆ. ವಿಧಾನ ಸೌದ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಜನ ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ.
Advertisement
Advertisement
ಬನ್ನೇರುಘಟ್ಟದಲ್ಲಿ ಗೋಡೆಯೊಂದು ಕುಸಿದಿದ್ದು ಭಾರೀ ನೀರು ನುಗ್ಗಿದೆ. ಪ್ರಾಣಿಗಳು ಪರದಾಡಿವೆ. ಬೆಳಗಾವಿಯ ಹುಕ್ಕೇರಿ ತಾಲೂಕಿನ ವಿವಿಧೆಡೆ 3 ಗಂಟೆಗಳ ಕಾಲ ಭಾರೀ ಮಳೆಯಾಗಿದೆ. ಗದಗದ ನರಗುಂದ ಬಳಿ ಮನೆಗಳಿಗೆ ಅಪಾರ ನೀರು ನುಗ್ಗಿದ್ದು, 2 ದಿನದ ಬಾಣಂತಿ, ಹಸುಗೂಸು ನರಳಾಡಿದ್ದಾರೆ. ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿಯ ಮಹಾವೀರ ಸರ್ಕಲ್ ಸಂಪೂರ್ಣ ಜಲಾವೃತವಾಗಿದೆ.
Advertisement
Advertisement
ಚಿಕ್ಕಬಳ್ಳಾಪುರ ನಗರದಲ್ಲಿ ರಸ್ತೆಗಳ ಮೇಲೆ ನೀರೋ ನೀರು. ಚಿತ್ರದುರ್ಗದಲ್ಲಿ ರಾತ್ರಿ ಇಡೀ ಸುರಿದ ಮಳೆಗೆ ಮಲ್ಲಾಪುರ ಕೆರೆ ಸತತ 6ನೇ ಬಾರಿಗೆ ಕೋಡಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ಗೆ ನೀರು ನುಗ್ಗಿ ಭಾರೀ ಅವಾಂತರವಾಗಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ತಾಯಿ-ಮಗಳು ಸಿಡಲು ತಾಗಿ ಸಾವನ್ನಪ್ಪಿದ್ದಾರೆ.