ಹುಬ್ಬಳ್ಳಿ: ಕೊಲಂಬೋದ ಕ್ಯಾಸಿನೋಗೆ ಯಾರು ಹೋಗಿದ್ದಾರೋ ಅವರಿಗೇ ಗೊತ್ತು. ನಾನು ಹೋಗಿರಲಿಲ್ಲ. ಅಲ್ಲದೆ ಈ ಕುರಿತು ಸ್ವತಃ ಕುಮಾರಸ್ವಾಮಿಯವರೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಎಲ್ಲ ವಿಚಾರವನ್ನು ಅವರು ತಿಳಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
Advertisement
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೆಡಿಎಸ್ ಶಾಸಕರು, ಮಾಜಿ ಶಾಸಕರು ಕೊಲಂಬೋದ ಪ್ರವಾಸಕ್ಕೆ ಹೋಗಿದ್ದು ನಿಜ. ಈ ವೇಳೆ ಕ್ಯಾಸಿನೋಗೂ ಹೋಗಿರಬಹುದು. ಆದರೆ ಯಾರು ಹೋಗಿದ್ದಾರೆ ಅವರಿಗೇ ಗೊತ್ತು. ನಾನು ಹೋಗಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಚುನಾವಣೆ ಇತ್ತು. ಹೀಗಾಗಿ ನಾನು ಹೋಗಿರಲಿಲ್ಲ. ಈಗ ಕೊಲಂಬೋ ಪ್ರವಾಸದ ವಿಚಾರ ಹೊರಗೆ ಬಂದಿದೆ. ಬಹಳ ಜನರು ಹೋಗಿ ಬಂದಿದ್ದಾರೆ. ಕುಮಾರಸ್ವಾಮಿ ತಪ್ಪು ಸರಿನೋ ನೇರವಾಗಿ ಹೇಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಎತ್ತಣ ಮಾಮರ, ಎತ್ತಣ ಕೋಗಿಲೆ- ಜಮೀರ್ ಹೇಳಿಕೆಗೆ ಹೆಚ್ಡಿಕೆ ತಿರುಗೇಟು
Advertisement
ಕುಮಾರಸ್ವಾಮಿ ಅವರು ಹೇಳುವ ಧೈರ್ಯ ಮಾಡಿದ್ದಾರೆ, ಅದನ್ನ ಮೆಚ್ಚಲೇಬೇಕು. ಗಾಂಜಾ ಡ್ರಗ್ಸ್ ವಿಚಾರದಲ್ಲಿ ಒಮ್ಮೆ ಎಲ್ಲರ ಹೆಸರು ಬಯಲಿಗೆ ಬಂದು ಬಿಡಲಿ. ಆಗ ಎಲ್ಲವೂ ಸರಿ ಆಗುತ್ತದೆ. ನಮ್ಮನ್ನು ಸಹ ಕೊಲಂಬೋ ಪ್ರವಾಸಕ್ಕೆ ಕರೆದಿದ್ದರು. ಆದರೆ ನಾನು ಹೋಗಿರಲಿಲ್ಲ. ರಾಜಕೀಯ ಚರ್ಚೆ ಮಾಡಲು ಹೋಗಿದ್ದರು. ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದು ಅಂತಾ ರೂಲ್ಸ್ ಇದೆಯೇ? ರಾಜಕೀಯ ಉದ್ದೇಶವಾಗಿ ಹೋಗಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಈ ಕುರಿತು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೊನರೆಡ್ಡಿ ಪ್ರತಿಕ್ರಿಯಿಸಿ, ನಾನು ಶಾಸಕನಾದ ವೇಳೆ ಜೆಡಿಎಸ್ ಶಾಸಕರು ಕ್ಯಾಸಿನೊಗೆ ಪ್ರವಾಸ ಹೋಗಿದ್ದು ನಿಜ. ಆಗ ನನಗೂ ಕರೆದರು ನಾನು ಹೋಗಿರಲಿಲ್ಲ. ನನ್ನ ಕ್ಷೇತ್ರದಲ್ಲೆ ಉಳಿದಿದ್ದೆ. ನಮ್ಮ ಶಾಸಕಾಂಗ ಪಕ್ಷದ ನಾಯಕರು ಟ್ವೀಟ್ ಮೂಲಕ ಹೇಳಿದ್ದಾರೆ. ಕ್ಯಾಸಿನೋಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರು ಹೋಗಿದ್ದರು. ರಾಜಕೀಯ ಚರ್ಚೆ ಮಾಡಲು ಕೊಲಂಬೋ ಗೆ ಹೋಗಿದ್ದು ಸತ್ಯ. ಒಂದು ಬಾರಿ ಪ್ರವಾಸ ರದ್ದಾಗಿತ್ತು. ಇನ್ನೊಮ್ಮೆ ಎಲ್ಲರೂ ಹೋಗಿದ್ದು ಸತ್ಯ. ಒಂದು ರಾಜಕೀಯ ಪಕ್ಷ ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದೆಂದು ನಿಯಮವಿದೆಯೇ ಎಂದು ಪ್ರಶ್ನಿಸಿದರು.