ಶಿವಮೊಗ್ಗ: ರಾಜಕಾಲುವೆ ಸಂಪೂರ್ಣ ದುರಸ್ತಿ ಮಾಡದೇ ಮುಚ್ಚಲು ಹೊರಟಿರುವುದನ್ನು ವಿರೋಧಿಸಿ ನಗರದ ಭಾರತಿ ಕಾಲೋನಿ ನಿವಾಸಿಗಳು ಕಾಮಗಾರಿ ಸ್ಥಳದಲ್ಲೇ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದು ಗೌಣ: ಸೋಮಣ್ಣ
Advertisement
ಭಾರತಿ ಕಾಲೋನಿಯಿಂದ ಸೀಗೆಹಟ್ಟಿಗೆ ಹೋಗುವ ರಾಜಕಾಲುವೆಯಲ್ಲಿ ಸಂಪೂರ್ಣ ಹೂಳು ತುಂಬಿಕೊಂಡಿದ್ದು, ಕಸ ಹಾಗೂ ಮಣ್ಣಿನಿಂದ ಮುಚ್ಚಿಕೊಂಡಿತ್ತು. ಒಂದು ಸಣ್ಣ ಮಳೆ ಬಂದರೂ ಕೂಡ ಕಾಲುವೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗುತ್ತಿತ್ತು. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. ಇದನ್ನೂ ಓದಿ: ಮನೆ ಬಾಗಿಲು ಮುರಿದು ಕಳ್ಳತನ-ಮೂವರು ಬಂಧನ
Advertisement
ಈ ಬಗ್ಗೆ ಇಲ್ಲಿನ ನಿವಾಸಿಗಳು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ ರಾಜಕಾಲುವೆ ಸ್ವಚ್ಛಗೊಳಿಸದೇ ಅವಸರ ಅವಸರವಾಗಿ ದುರಸ್ತಿ ಕೈಗೊಂಡಿದ್ದಾರೆ. ಆದರೆ ಮಣ್ಣು, ಕಡ್ಡಿ ಕಸ ಕಾಲುವೆಯಲ್ಲಿ ಹಾಗೆಯೇ ಉಳಿದಿದ್ದರೂ ಕೂಡ ರಾಜಕಾಲುವೆ ಮೇಲೆ ಸ್ಲ್ಯಾಬ್ ಹಾಕಿ ಮುಚ್ಚಲು ಹೊರಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
Advertisement
ಪೂರ್ಣ ಕೆಲಸ ಮಾಡದೇ ಕಾಲುವೆ ಮುಚ್ಚಿದರೆ ನೀರು ಸರಾಗವಾಗಿ ಹರಿಯದೇ ಮತ್ತೆ ಮನೆಗಳಿಗೆ ನುಗ್ಗುತ್ತದೆ. ಆದ್ದರಿಂದ ರಾಜಕಾಲುವೆ ಮುಚ್ಚುವುದನ್ನು ನಿಲ್ಲಿಸಬೇಕು. ಸಂಪೂರ್ಣ ಸ್ವಚ್ಚಗೊಳಿಸಿದ ಬಳಿಕವಷ್ಟೇ ಮುಚ್ಚಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.