ಚಿಕ್ಕಮಗಳೂರು: ಕೆಲವೊಮ್ಮೆ ಆಧಾರವಿಲ್ಲದೆಯೂ ಸುದ್ದಿ ಬರುತ್ತೆ. ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆಯಾಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮುಖ್ಯಮಂತ್ರಿ, ಸಚಿವರು, ಶಾಸಕರು ತಲೆಕೆಡಿಸಿಕೊಳ್ಳಬೇಕಾಗಿರುವುದು ಯಾರು ಮುಖ್ಯಮಂತ್ರಿ ಆಗ್ತಾರೆ ಅಂತ ಅಲ್ಲ. ಇದು ಯಾವುದೋ ಗೊಂದಲಗಳಿಗೆ ತಲೆಕೆಡಿಸಿಕೊಳ್ಳುವ ಸಮಯವಲ್ಲ. ಇದು ಜನ ಒಟ್ಟಿಗೆ ಇದ್ದು, ಅವರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿ ನಮ್ಮ ಕರ್ತವ್ಯ ಮಾಡುವ ಸಮಯ ಎಂದು ತಿಳಿಸಿದರು.
Advertisement
Advertisement
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ಹೇಗೆ ವಿಷಯ ಬಿಡುತ್ತಿದ್ದಾರೋ ಗೊತ್ತಿಲ್ಲ. ನಾವು ಈಗ ಜನರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಷ್ಟೆ ಆ ಕೆಲಸವನ್ನ ಮಾಡುವಂತೆ ಅಗ್ರಹಪೂರಕವಾಗಿ ವಿನಂತಿ ಮಾಡುತ್ತೇನೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಸರ್ಕಾರ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೆ. ಚರ್ಚೆ ಯಾಕೆ ಆಗುತ್ತಿದೆ ಗೊತ್ತಿಲ್ಲ. ಜನ ನಮ್ಮನ್ನ ಆರಿಸಿದ್ದು ಅವರು ಸಂಕಷ್ಟದಲ್ಲಿದ್ದಾಗ ನೆರವಿಗೆ ಬರಲೆಂದು. ಈಗ ಜನ ಸಂಕಷ್ಟದಲ್ಲಿದ್ದಾರೆ ಅವರ ನೆರವಿಗೆ ನಿಲ್ಲಬೇಕು ಎಂದರು.
Advertisement
ಉಳಿದದ್ದು ಸತ್ಯವೋ… ಸುಳ್ಳೋ ಗೊತ್ತಿಲ್ಲ. ಕೆಲವೊಮ್ಮೆ ಆಧಾರವಿಲ್ಲದೆಯೂ ಸುದ್ದಿ ಬರುತ್ತೆ. ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆಯಾಡುತ್ತೆ. ಇದು ಯಾವುದಕ್ಕೂ ಕಾಲವಲ್ಲ. ಊಹಾಪೋಹಾದ ಆಧಾರವಿಲ್ಲದ ಪ್ರಶ್ನೆಗೆ ಉತ್ತರಿಸುವುದಕ್ಕೆ ಬರುವುದಿಲ್ಲ. ಅಧಿಕೃತ ಮಾಹಿತಿಗಳು ತಲುಪಿಲ್ಲ. ಅಂತೆ-ಕಂತೆಗಳಿಗೆಲ್ಲಾ ನಮ್ಮಂತ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಉತ್ತರಿಸಬಾರದು ಎಂದು ಹೇಳಿದರು.
Advertisement
ಕೇಂದ್ರಿಯ ನಾಯಕತ್ವ ಕಾಲ-ಕಾಲಕ್ಕೆ ತಕ್ಕಂತೆ ಬೇರೆ-ಬೇರೆ ರಾಜ್ಯದಲ್ಲಿ ಆ ಜನರ ಹಿತ ಹಾಗೂ ಪಕ್ಷದ ಹಿತವನ್ನ ಗಮನದಲ್ಲಿಟ್ಟುಕೊಂಡು ನಿರ್ಣಯ ತೆಗೆದುಕೊಂಡಿದೆ. ಆ ಕಾಲ ಬಂದಾಗ ಅವರು ನಿರ್ಣಯ ತೆಗೆದುಕೊಳ್ಳಬಹುದು. ಸದ್ಯಕ್ಕೆ ಈಗ ನಾವೆಲ್ಲರೂ ಕೋವಿಡ್ ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ ಎಂದರು.