-ಮೊಬೈಲ್ನಲ್ಲಿ ‘ಕೈ’ ಮುಖಂಡನ ಫೋಟೋ
ಹುಬ್ಬಳ್ಳಿ: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಅವರನ್ನ ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಗಿರೀಶ್ ಗದಿಗೆಪ್ಪಗೌಡರ್ ಮಾಜಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸ್ಥಳೀಯ ಕಾಂಗ್ರೆಸ್ ಮುಖಂಡ. ನಟಿ ರಾಗಿಣಿ ದ್ವಿವೇದಿ ಮೊಬೈಲ್ ನಲ್ಲಿ ಗಿರೀಶ್ ಗದಿಗೆಪ್ಪಗೌಡರ್ ಫೋಟೋ ಲಭ್ಯವಾದ ಹಿನ್ನೆಲೆ ಸಿಸಿಬಿ ಪೊಲೀಸರು ಗಿರೀಶ್ ಅವರನ್ನ ವಿಚಾರಣೆ ನಡೆಸಿದ್ದಾರೆ. ರಾಗಿಣಿ ಮತ್ತು ಗಿರೀಶ್ ಜೊತೆಯಾಗಿ ಗೋವಾಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ನಟಿ ಪಾರೂಲ್ ಬೆಂಬಲಕ್ಕೆ ನಿಂತ ಶೃತಿ ಹರಿಹರನ್
Advertisement
Advertisement
ಗೋವಾದಲ್ಲಿ ರಾಗಿಣಿ ಜೊತೆ ಗಿರೀಶ್ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ನಟಿಯ ಬಂಧನವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ರಾಗಿಣಿ ಜೊತೆಗಿನ ಫೋಟೋಗಳನ್ನ ಡಿಲೀಟ್ ಮಾಡಿಕೊಂಡಿದ್ದರು. ಸದ್ಯ ಸಿಸಿಬಿ ಹಳೆಯ ಫೋಟೋಗಳನ್ನ ಹಿಡಿದು ವಿಚಾರಣೆ ನಡೆಸುತ್ತಿದೆ.
Advertisement
Advertisement
ಇಂದು ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ವಿಚರಣೆ ವೇಳೆ ತಮ್ಮ ಜೊತೆ ಪಾರ್ಟಿಗೆ ಬರುತ್ತಿದ್ದ ರಾಜಕಾರಣಿಗಳ ಹೆಸರು ಬರೆದುಕೊಟ್ಟಿರುವ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇತ್ತ ವರದಿ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡನನ್ನ ಸಿಸಿಬಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಇಬ್ಬರು ನಟಿಯರ ಮೊಬೈಲ್ಗಳಿಂದ ರಿಟ್ರೈವ್ ಮಾಡಲಾದ ವಾಟ್ಸಪ್ ಮತ್ತು ಆಡಿಯೋ ತುಣುಕುಗಳನ್ನು ಮುಂದಿಟ್ಟುಕೊಂಡು ಸಿಸಿಬಿ ವಿಚಾರಣೆ ನಡೆಸಿದೆ. ಆದರೆ ಯಾವುದಕ್ಕೂ ಸರಿಯಾದ ಉತ್ತರ ನೀಡದೇ ಇಬ್ಬರು ಹಾರಿಕೆಯ ಉತ್ತರಗಳನ್ನೇ ನೀಡುತ್ತಿದ್ದಾರೆ. ಹೀಗಾಗಿ ಇಬ್ಬರು ನಟಿಯರ ಮೇಲೆ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ. ನಿಮ್ಮನ್ನು ಗೌರವದಿಂದ ಕೂರಿಸಿಕೊಂಡು ಪ್ರಶ್ನೆ ಕೇಳಲಾಗ್ತಿದೆ. ಸೆಲ್ನಲ್ಲಿ ಹಾಕಿ ವಿಚಾರಣೆ ಮಾಡಿದ್ರೆ ಸರಿ ಹೋಗುತ್ತೆ ಅನ್ಸುತ್ತೆ.. ಸೆಲ್ನಲ್ಲಿ ಕೂರಿಸಬೇಕಾ..? ಅಥವಾ ಉತ್ತರ ಹೇಳ್ತೀರಾ ಅಂತಾ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್ಶಿಪ್
ಶನಿವಾರ ಇದೇ ಪ್ರಕರಣದ 5ನೇ ಆರೋಪಿ ವೈಭವ್ ಜೈನ್ನ್ನು ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ ವೈಯ್ಯಾಲಿಕಾವಲ್ನ ನಿವಾಸದಲ್ಲಿ ವೈಭವ್ ಜೈನ್ನನ್ನು ಬಂಧಿಸಲಾಗಿತ್ತು. ಈತ ಇಷ್ಟು ದಿನ ಕೊರೋನಾದಿಂದಾಗಿ ವೈಯ್ಯಾಲಿಕಾವಲ್ನ ತಮ್ಮ ನಿವಾಸದಲ್ಲಿ ಹೋಂ ಐಸೋಲೇಶನ್ನಲ್ಲಿದ್ದ. ಇನ್ನು ವೈಭವ್ ಜೈನ್ ಚಿನ್ನದ ವ್ಯಾಪಾರಿಯಾಗಿದ್ದು, ಜೊತೆಜೊತೆಗೆ ಪಾರ್ಟಿಗಳಿಗೆ ಡ್ರಗ್ನ್ನು ಸಪ್ಲೈ ಮಾಡುತ್ತಿದ್ದನು. ತನಗೆ ಹಾಗೂ ರಾಗಿಣಿಗೆ ಪಾರ್ಟಿಗಳಲ್ಲಿ ವೈಭವ್ ಜೈನ್ ಡ್ರಗ್ ನೀಡ್ತಿದ್ದ ಅಂತಾ ನಿನ್ನೆಯಷ್ಟೇ ರವಿಶಂಕರ್ ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಮತ್ತೆ ಪೊಲೀಸ್ ಕಸ್ಟಡಿಗೆ ಕೇಳ್ಬೇಡಿ- ಅಧಿಕಾರಿಗಳ ಮುಂದೆ ರಾಗಿಣಿ, ಸಂಜನಾ ಗೋಳು
ಸೋಮವಾರ ತುಪ್ಪದ ಬೆಡಗಿಯ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ ಎನ್ಡಿಪಿಎಸ್ ಕೋರ್ಟಿನಲ್ಲಿ ರಾಗಿಣಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಜಾಮೀನು ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ. ಇತ್ತ ನಾಳೆ ಎನ್ಡಿಪಿಎಸ್ ಕೋರ್ಟಿಗೆ ನಟಿ ಸಂಜನಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಇದೇ ವೇಳೆ 1ನೇ ಎಸಿಎಂಎಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ. ನಾಳೆಯೇ ರಾಗಿಣಿ, ಸಂಜನಾ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಮತ್ತಷ್ಟು ದಿನ ಇಬ್ಬರೂ ನಟಿಯರನ್ನ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನೂ ಓದಿ: ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್