ಬೆಂಗಳೂರು: ಗಾಂಧಿನಗರದ ರಸ್ತೆಯಲ್ಲಿ ನೀವು ಓಡಾಡಿದ್ರೆ ಈ ಮಹಿಳೆಯ ಪುಟ್ಟ ಬದುಕು ನೀವು ನೋಡಿರಬಹುದು. ಇರಲು ಮನೆ ಇಲ್ಲದೇ ಮಗು ಮತ್ತು ವಯಸ್ಸಾದ ತಾಯಿ ಜೊತೆ ಫುಟ್ಪಾತ್ ನಲ್ಲಿಯೇ ಜೀವನ ದೂಡುತ್ತಿದ್ದಾರೆ. ಮನೆಗಾಗಿ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ರೂ ಇವರಿಗೊಂದು ಸೂರು ಇದುವರೆಗೂ ದೊರಕಿಲ್ಲ.
Advertisement
ಬಿಎ ಪದವಿಧರೆಯಾಗಿರುವ ಪೂರ್ಣಿಮಾ ದೋಬಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಗೆ ದುಡ್ಡುಕಟ್ಟೋಕೆ ಆಗದೇ ಗಾಂಧಿನಗರದ ಫುಟ್ಪಾತ್ ನಲ್ಲಿ ಜೀವನ ನಡೆಸುತ್ತಿದ್ದಾರೆ. ವಯಸ್ಸಾದ ತಾಯಿ ಹಾಗೂ ಮಗುವನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕೊರೊನಾ ಬಂದು ದುಡಿಮೆ ನೆಲಕಚ್ಚಿದೆ. ಹೀಗಾಗಿ ಮನೆ ಬಾಡಿಗೆ ಕಟ್ಟೋಕೆ ಸಾಧ್ಯವಾಗದೇ ಗಾಂಧಿನಗರದ ರಸ್ತೆಯಲ್ಲಿಯೇ ರಾತ್ರಿಯನ್ನು ಕಳೆಯುತ್ತಿದ್ದಾರೆ. ಕೈಯಲ್ಲಿ ಚಾಕು, ಕೋಲು, ಮೆಣಸಿನ ಪೌಡರ್ ಇಟ್ಕೊಂಡು ರಾತ್ರಿ ಕಳೆಯುತ್ತಿದ್ದಾರೆ. ಅದೆಷ್ಟೇ ಬಾರಿ ಜನಪ್ರತಿನಿಧಿಗಳಿಗೆ ಸೂರಿಗಾಗಿ ಮನವಿ ಮಾಡಿದರೂ ಈಡೇರಲಿಲ್ಲ.
Advertisement
Advertisement
ಕೆಲವರು ಬಂದು ನಿಮ್ಮನ್ನ ಇಲ್ಲಿಂದ ಜಾಗ ಖಾಲಿ ಮಾಡಿಸ್ತೀವಿ ಅಂತ ಧಮ್ಕಿ ಹಾಕ್ತಾರೆ. ಹಾಗಾದ್ರೆ ನಮಗೆ ರೇಷನ್ ಕಾರ್ಡ್, ವೋಟರ್ ಐಡಿ ಕೊಟ್ಟಿರೋದು ಯಾಕೆ? ಬಾಡಿಗೆ ಹಣ ನೀಡಲು ಸಾಧ್ಯವಾಗದ ಹಿನ್ನೆಲೆ ರಸ್ತೆಯ ಬದಿಯಲ್ಲಿ ತಾಯಿ ಮತ್ತು ಮಗು ಜತೆ ವಾಸವಾಗಿದ್ದೇನೆ. ರಾತ್ರಿ ಮಲಗುವಾಗ ಸೇಫ್ಟಿಗಾಗಿ ಮೆಣಸಿನ ಪುಡಿ, ಕೋಲು, ಚಾಕುಗಳನ್ನ ಇಟ್ಟಿಕೊಂಡಿರುತ್ತೇವೆ. ಹಾಗೆ ನಾಯಿ ಸಹ ಸಾಕಿಗೊಂಡಿದ್ದೇನೆ ಎಂದು ಪೂರ್ಣಿಮಾ ಹೇಳುತ್ತಾರೆ.
Advertisement
ಇನ್ನು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೂರ್ಣಿಮಾ ತಾಯಿ ತುಳಸಿ, ಯಾರು ಬಂದು ನಮ್ಮ ಕಷ್ಟ ಕೇಳುತ್ತಿಲ್ಲ. ಇಲ್ಲೇ ಹುಟ್ಟಿ ಬೆಳೆದವರು ನಾನು. ಲಾಕ್ಡೌನ್ ವೇಳೆ ಎಷ್ಟೋ ದಿನ ಹಸಿವಿನಿಂದ ಮಲಗಿದ್ದೇವೆ. ಕೊರೊನಾ ಸಮಯದಲ್ಲಿ ರೇಷನ್ ಸಹ ನಮಗೆ ಸಿಗಲಿಲ್ಲ. ಕೆಲ ಪುಡಾರಿಗಳು ರಾತ್ರಿ ಬಂದು ಸಮಸ್ಯೆ ಮಾಡ್ತಾರೆ ಎಂದು ಕಣ್ಣೀರು ಹಾಕುತ್ತಾರೆ.
ಪೂರ್ಣಿಮಾ ಅವರಿಗೆ ಮದ್ವೆಯಾಗಿ ಮಗುವಾದ ಮೇಲೆ ಗಂಡ ಕೈಕೊಟ್ಟು ಹೋಗಿದ್ದಾನೆ. ಅತ್ತ ಕಾಯಿಲೆ ಬಿದ್ದ ತಾಯಿಯನ್ನು ಈ ಪುಟ್ಟ ಸೂರಿನಲ್ಲಿ ನೋಡಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ. ಮಳೆ ಬಂದಾಗ ಇವರ ಕಷ್ಟ ನೋಡಲು ಆಗಲ್ಲ. ಸ್ಥಳೀಯ ಶಾಸಕರಾಗಿರುವ ದಿನೇಶ್ ಗುಂಡೂರಾವ್ ನಮ್ಮ ಸಹಾಯಕ್ಕೆ ಬರಲಿ ಎಂದು ಬಡ ಕುಟುಂಬ ಮನವಿ ಮಾಡಿಕೊಂಡಿದೆ.